ಮಾಜಿ ಐಎಎಸ್‌ ಅಧಿಕಾರಿ ಶಾ ಫೈಸಲ್‌ ಅವರು ಮಾರ್ಜ್‌ 16 ರಂದು ಹೊಸ ರಾಜಕೀಯ ಪಕ್ಷವೊಂದನ್ನು ಹುಟ್ಟು ಹಾಕಲಿದ್ದಾರೆ. ಭಾನುವಾರ ರಾಜ್‌ಬಾಘನ ಗಿಂಡುನ್‌ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಮೂವ್‌ಮೆಂಟ್‌ ಪಕ್ಷ ಹುಟ್ಟಿಕೊಳ್ಳಲಿದೆ.

2010 ರ ಸಾಲಿನ ಐಎಎಸ್‌ ಟಾಪರ್‌ ಆಗಿದ್ದ ಫೈಸಲ್‌ ಅವರು ಈ ವರ್ಷ ಜನವರಿಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಕಾಶ್ಮೀರಿಗಳ ಮೇಲೆ ಹಿಂಸೆ ಹಾಗೂ ಅಲ್ಲಿ ಸ್ಥಳೀಯ ಜನರ ಮೆಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ.  ರಾಜೀನಾಮೆ ನೀಡಿದ ಬಳಿಕ ಕಾಶ್ಮೀರದ ಯುವ ಜನತೆಯೊಂದಿಗೆ ನಿರಂತರವಾಗಿ ಬೆರೆತು ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ.



Comments