2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸೈನ್ಯ ಜಗತ್ತಿನಲ್ಲಿ ಯಾರು ಸೃಷ್ಟಿಸದ ಇತಿಹಾಸ ಸೃಷ್ಟಿಸಲಿದೆ


1980ರ ಜನಸಂಘ ಬಿಜೆಪಿ ಪಕ್ಷವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಆರಂಭಿಸಿದ ನಂತರ ಮೊತ್ತ ಮೊದಲ ಬಾರಿಗೆ 545 ಲೋಕಸಭಾ ಕ್ಷೇತ್ರಗಳ ಪೈಕಿ 437 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಈ ನಿಟ್ಟಿನಲ್ಲಿ ದೇಶದ ರಾಜಕೀಯರಂಗದಲ್ಲಿ ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಹೆಚ್ಚು ಜನಪ್ರಿಯವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ವರದಿ ವಿವರಿಸಿದೆ.

ಇನ್ನೊಂದೆ ಕಾಂಗ್ರೆಸ್‌ ಈ ಬಾರಿ 423 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿತ್ತು, ಉತ್ತರ ಪ್ರದೇಶದ ಕೆಲವೇ ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸುವುದು ಬಾಕಿ ಇದೆ. ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ, ಬಿಜೆಪಿಯನ್ನು ಈ ವಿಚಾರದಲ್ಲಿ ಕಾಂಗ್ರೆಸ್‌ ಮೀರಿಸಲಾಗದು.

2014ರಲ್ಲಿ 464 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಣಕ್ಕಿಳಿದಿತ್ತು. ಆದರೆ ಗೆದ್ದಿದ್ದು ಕೇವಲ 44 ಸೀಟ್‌ಗಳು. 2009ರಲ್ಲಿ ಬಿಜೆಪಿ 433 ಹಾಗೂ ಕಾಂಗ್ರೆಸ್‌ 444, 2004ರಲ್ಲಿ ಬಿಎಪಿ 364 ಹಾಗೂ ಕಾಂಗ್ರೆಸ್‌ 414 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.

Comments