ಒಂದು ಕಾಲದಲ್ಲಿ ಕರ್ನಾಟಕ ರಾಜಕೀಯದಲ್ಲಿ ರಾಜನಂತೆ ಮೆರೆದು ನಾನಾ ಕಾರಣಗಳಿಂದ ತೆರೆಮೆರೆಗೆ ಸರಿದ ನಾಯಕ ಜನಾರ್ಧನ ರೆಡ್ಡಿ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಪ್ರಮುಖ ನೆಲೆಯನ್ನು ಕಟ್ಟಿಕೊಟ್ಟಿದ್ದು ಕರ್ನಾಟಕ ರಾಜ್ಯ. ಯಡಿಯೂರಪ್ಪ ಹಾಗೂ ಇನ್ನಿತರ ಹಿರಿಯ ನಾಯಕರ ಫಲದಿಂದ ಬಿಜೆಪಿ ತನ್ನ ಸ್ವಂತ ಬಲದಿಂದ ಸರ್ಕಾರ ರಚಿಸಿತು.
ಕರ್ನಾಟಕದಲ್ಲಿ ಬಿಜೆಪಿ ಆಧಿಕಾರವನ್ನು ಕಂಡುಕೊಳ್ಳಲು ಕರ್ನಾಟಕದ ಹಲವು ಬಿಜೆಪಿ ನಾಯಕರು ಶ್ರಮಿಸಿದ್ದರೆ. ಅಂತಹ ನಾಯಕರಲ್ಲಿ ಬಳ್ಳಾರಿಯ ಗಣಿಧನಿ ಜನಾರ್ಧನ ರೆಡ್ಡಿ ಕೂಡ ಒಬ್ಬರು. ಬಿಜೆಪಿ ರಾಜ್ಯಧ್ಯಾಕ್ಷ ಹಾಗೂ ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪರ ಆಪ್ತರಲ್ಲಿ ಗುರುತಿಸಿಕೊಂಡಿದ್ದವರಲ್ಲಿ ಜನಾರ್ಧನ ರೆಡ್ಡಿ ಕೂಡ ಒಬ್ಬರು. ಕರ್ನಾಟಕದಲ್ಲಿ ಬಿಜೆಪಿ ಭದ್ರ ನೆಲೆಯನ್ನು ಕಂಡುಕೊಳ್ಳಲು ಜನಾರ್ಧನ ರೆಡ್ಡಿಯವರ ಕಾಣಿಕೆ ಆಪಾರ.
ಜನಾರ್ಧನ ರೆಡ್ಡಿ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದವರು. ರಾಜಕೀಯದಲ್ಲಿ ನಡೆದ ಆನೀರಿಕ್ಷಿತ ಬೆಳವಣಿಗಳಿಂದಾಗಿ ಜನಾರ್ಧನ ರೆಡ್ಡಿಯವರು ಬಿಜೆಪಿಯಿಂದ ದೂರ ಸರಿಯಬೇಕಾಯಿತು. ರೆಡ್ದಿಯವರ ಮೇಲೆ ಆನೇಕ ಕೇಸುಗಳು ದಾಖಲಾದವು ಮಾತ್ರವಲ್ಲದೆ ಹಲವು ತಿಂಗಳುಗಳ ಕಾಲ ಜೈಲಿನಲ್ಲಿರಬೇಕಾಯಿತು. ಬಿಜೆಪಿ ತನ್ನ ಪಕ್ಷಕ್ಕಾಗುವ ತೊಂದರೆಯನ್ನು ತಪ್ಪಿಸಲು ಜನಾರ್ಧನ ರೆಡ್ಡಿಯವರಿಗೂ ಹಾಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಹೇಳಿತು. ಅದರೆ ನಂತರದ ಬೆಳವಣಿಗಳಲ್ಲಿ ಬಿಜೆಪಿ ಜನಾರ್ಧನ ರೆಡ್ಡಿಯವರು ಬಿಜೆಪಿಯಿಂದ ಹಾಗೂ ಸಕ್ರೀಯ ರಾಜಕಾರಣದಿಂದ ದೂರ ಉಳಿಯಬೇಕಾಯಿತು. ಅದರೆ ಸದ್ಯ ರೆಡ್ಡಿಯವರು ಹೇಳಿರುವ ಮಾತುಗಳನ್ನು ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರ. ಅಷ್ಟಕ್ಕೂ ರೆಡ್ಡಿ ಹೇಳಿದ್ದೇನು ಗೊತ್ತಾ
ಜನಾರ್ಧನ ರೆಡ್ಡಿಯವರು ರಾಜಕೀಯಕ್ಕೆ ಮತ್ತೇ ಎಂಟ್ರಿಯಾಗಬೇಕು ಎಂಬ ಮಾತುಗಳು ಸಾಮಾಜೀಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಈ ಎಲ್ಲಾ ಮಾತುಗಳಿಗೆ ಪೂರಕವಾದ ಮಾತನ್ನು ಸ್ವತಃ ಜನಾರ್ಧನ ರೆಡ್ಡಿಯವರೇ ಹೇಳಿದ್ದರೆ. ಹೌದು, ಸಕ್ರಿಯ ರಾಜಕಾರಣದಿಂದ ಮೂಲೆಗುಂಪಾಗಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರು ತಮ್ಮ ರೆಡ್ಡಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದು, ಮತ್ತೆ ಪಾಲಿಟಿಕ್ಸ್ ಗೆ ಎಂಟ್ರಿ ಕೊಡುವ ಹುಮ್ಮಸ್ಸಿನಲ್ಲಿದ್ದಾರೆ.
ಬಾಗಲಕೋಟೆಯ ಸಂಗಮ ಕ್ರಾಸ್ನಲ್ಲಿ ಇಂದು ನಡೆದ ರೆಡ್ಡಿ ಸಮುದಾಯದ ಸಭೆಯಲ್ಲಿ ಜನಾರ್ಧನ ರೆಡ್ಡಿಯವರು ತಮ್ಮ ಬೆಂಬಲಿಗರಿಗೆ ಸಿಹಿಸುದ್ದಿಯನ್ನು ಕೊಟ್ಟಿದ್ದರೆ. ರೆಡ್ಡಿ ಸಮುದಾಯದಲ್ಲಿ ಮಾತನಾಡಿದ ಗಣಿಧನಿ ನಾನು ರಾಜಕೀಯಕ್ಕೆ ಬಂದೇ ಬರ್ತಿನಿ, ಬೆಳೆದೇ ಬೆಳೆಯುತ್ತೇನೆ. ಒಳ್ಳೇ ರಾಜಕಾರಣಿ ಆಗಿಯೇ ಆಗುತ್ತೇನೆ ಎಂದರು. ನಾನು ರಾಜಕೀಯ ಉದ್ದೇಶಕ್ಕಾಗಿ ಪಾದಯಾತ್ರೆ ಮಾಡ್ತಿಲ್ಲ. ನನಗೆ ರಾಜಕೀಯ ಬೇಕು ಅನಿಸಿದ್ರೆ ಅದಕ್ಕೆ ಕೇವಲ ಒಂದು ವರ್ಷ ಟೈಮ್ ಸಾಕು, ಆ ಕಾಲ ಬಂದೇ ಬರುತ್ತದೆ. ನನ್ನ ಸಮಾಜವನ್ನ ಬಳಸಿಕೊಂಡು ರಾಜಕೀಯ ಮಾಡುವುದಿಲ್ಲ ಎಂದು ಹೇಳಿದರು.
ರಾಜಕೀಯಕ್ಕೆ ಬರುವುದು ಖಂಡಿತ ಅದಕ್ಕಾಗಿ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತೆನೆ. ಈ ಹಿಂದೆ ಯಡಿಯೂರಪ್ಪನವರ ಜೊತೆಗೂಡಿ ಬಿಜೆಪಿ ಆಧಿಕಾರಕ್ಕೆ ಬರಲು ಪ್ರಯತ್ನಿಸಿದೆ ಎಂದರು. ಜನಾರ್ಧನ ರೆಡ್ಡಿಯವರು ಹೇಳಿರುವ ಈ ಮಾತು ಸದ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನವನ್ನು ಮೂಡಿಸಿದೆ.
Comments
Post a Comment