ಮೇ 23 ಕ್ಕೆ ಬಿಜೆಪಿ ಗೆ ಡಬಲ್ ಧಮಾಕ ಒಂದು ಕಡೆ ಮೋದಿ ಪ್ರಧಾನಿ ಇನ್ನೊಂದು ಕಡೆ ಕನ್ನಡ-ಆಂಧ್ರ ಕಿಂಗ್ ಬಿಜೆಪಿ ಗೆ ರೀ ಎಂಟ್ರಿ
ಮೇ 23 ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಅದಾದ ನಂತರ ಕರ್ನಾಟಕ ರಾಜಕೀಯದಲ್ಲಿ ದೊಡ್ಡ ರಾಜಕೀಯ ಸ್ಫೋಟವಾಗಲಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು. ಇನ್ನು ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಎರಡು ಸ್ಥಾನಗಳಲ್ಲಿ ಜಯಗಳಿಸಿ, ತನ್ನ ಬಲ ಹೆಚ್ಚಿಸಿಕೊಳ್ಳಲಿದೆ.
104 ಸ್ಥಾನಗಳ ಜೊತೆಗೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳ ಬೆಂಬಲ ದೊರೆಯಲಿದೆ. ಇದರಿಂದ ಬಿಜೆಪಿ ಬಲ 108ಕ್ಕೆ ಏರಲಿದೆ. ಉಳಿದಿರುವ ಐದಾರು ಸ್ಥಾನಗಳಿಗೆ ಕಾಂಗ್ರೆಸ್ ಜೊತೆಗೆ ಮುಂದುವರಿಯಲ್ಲ ಎಂದಿರುವ ರಮೇಶ್ ಜಾರಕಿಹೊಳಿ ಮತ್ತು ಟೀಂ ಜೊತೆ ಸೇರಿ ಸರ್ಕಾರ ರಚನೆ ಮಾಡಲಾಗುವುದು ಎಂದರು.
ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಭಿನ್ನಮತ ಇರುವ ಕಾರಣ, ಬಿಜೆಪಿ ಏಕಶಿಲೆಯಂತೆ ಗಟ್ಟಿಯಾಗಿ ನಿಂತಿರುವ ಕಾರಣ ಸರ್ಕಾರ ರಚನೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ.
ಇದೇ ಮೇ 5 ರಂದು ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ 268 ಬೂತ್ ಪದಾಧಿಕಾರಿಗಳ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ನಡೆಸಲಿದೆ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಉಮೇಶ್ ಜಾಧವ್ ರವರ ವೈಯಕ್ತಿಕ ವರ್ಚಸ್ಸು ಹಾಗೂ ಬಿಜೆಪಿ ಶಕ್ತಿ ಒಗ್ಗೂಡಿ ಬಿಜೆಪಿ ಗೆಲುವು ಸಾಧಿಸಲಿದೆ. ಚಿಂಚೋಳಿಯಲ್ಲಿ ಕಾಂಗ್ರೆಸ್ ಗೆ ಅಭ್ಯರ್ಥಿಗಳು ಸಿಗದೆ ಕೊನೆ ಕ್ಷಣದಲ್ಲಿ ಬಿಜೆಪಿ ಕಾರ್ಯಕರ್ತನನ್ನೆ ಕಣಕ್ಕಿಳಿಸಿದೆ ಎಂದು ಆರೋಪಸಿದರು.
ಅದರಂತೆಯೇ ಮೇ 23 ಕ್ಕೆ ಬಿಜೆಪಿ ಗೆ ಗಣಿ ದನಿ ಜನಾರ್ಧನ ರೆಡ್ಡಿ ಅವರು ಬಿಜೆಪಿ ಗೆ ಸೇರಲಿದ್ದಾರೆ ಎಂದು ವಿಶೇಷ ಮಾಹಿತಿಗಳು ದೊರಕಿವೆ
Comments
Post a Comment