ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಿಎಂ ಆಗುವುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿದ್ದಾರೆ.
ಚಿಂಚೋಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಮೇ 23 ರ ಬಳಿಕ ರಾಜ್ಯ ರಾಜಕೀಯದಲ್ಲಿ ಭೂಕಂಪ ಆಗಲಿದೆ ಎಂದು ಮಾಲೀಕಯ್ಯ ಗುತ್ತೇದಾರ್ ಹೇಳಿರುವುದು ನಿಜ, ದೊಡ್ಡ ಪ್ರಮಾಣದಲ್ಲೇ ಭೂಕಂಪ ಆಗಲಿದೆ. ಕಾಂಗ್ರೆಸ್ ಪಕ್ಷದ 20 ಶಾಸಕರು ಅವರಾಗಿಯೇ ಬಿಜೆಪಿ ಸೇರುತ್ತಾರೆ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿಲ್ಲವೆಂದು ರಾಜ್ಯದ ಜನ ಕಣ್ಣೀರಿಡುತ್ತಿದ್ದಾರೆ. ಮೇ 23ರ ಬಳಿಕ ಕಾಂಗ್ರೆಸ್ ಪಕ್ಷ 4 ಭಾಗವಾಗುತ್ತದೆ. ಈ ಮೈತ್ರಿ ಸಂಸಾರ ಬಹಳ ದಿನ ನಡೆಯಲ್ಲ, ವಿಚ್ಛೇದನ ಆಗುತ್ತೆ ಎಂದು ಹೇಳಿದ್ದಾರೆ.
ಮೇ 23 ರ ಬಳಿಕ ದೊಡ್ಡ ರಾಜಕೀಯ ಸಂಚಲನ ಆಗಲಿದೆ. 104 ಬಿಜೆಪಿ ಶಾಸಕರಿದ್ದರೂ ಯಡಿಯೂರಪ್ಪ ಸಿಎಂ ಆಗಿಲ್ಲವೆಂದು ರಾಜ್ಯದ ಜನ ಕಣ್ಣೀರಿಟ್ಟಿದ್ದು, ಮಹತ್ವದ ಬದಲಾವಣೆಯಾಗಲಿದೆ ಎಂದು ತಿಳಿಸಿದ್ದಾರೆ.
Comments
Post a Comment