ಮೇ ಇಪ್ಪತ್ಮೂರರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜ್ಯ ಸರ್ಕಾರದ ಕೌಂಟ್ ಡೌನ್ ಆರಂಭಗೊಳ್ಳುವ ಎಲ್ಲಾ ಲಕ್ಷಣ ದಟ್ಟವಾಗಿರುವಾಗಲೇ ಇತ್ತ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಬಿಜೆಪಿ ರಾಜ್ಯ ಉಪಾಧ್ಯಕ್ಷರ ಭೇಟಿ ಮಾಡಿರುವುದು ಸಂಚಲನ ಮೂಡಿಸಿದೆ.
ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್ರನ್ನು ಜೆಡಿಎಸ್ ರಾಜ್ಯಧ್ಯಕ್ಷ ಹೆಚ್.ವಿಶ್ವನಾಥ್ ಭೇಟಿಯಾಗಿದ್ದಾರೆ. ಸದ್ಯ ವಿಷಯ ರಾಜಕೀಯ ವಲಯದಲ್ಲಿ ತೀವ್ರ ಗುಸು ಗುಸು ಕೇಳಿ ಬರಲು ಕಾರಣವಾಗಿದೆ. ನಿನ್ನೆ ಮೈಸೂರಿನ ಜಯಲಕ್ಷ್ಮಿ ಪುರಂನಲ್ಲಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಭೇಟಿ ನೀಡಿದ ಹೆಚ್. ವಿಶ್ಚನಾಥ್ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ಅಂಡ್ ಟೀಂ ಜಿ.ಟಿ ದೇವೇಗೌಡ ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತು. ಆಗ ವಿಶ್ವನಾಥ್ರನ್ನು ಕಡೆಗಣಿಸಿದ್ದ ಸಿದ್ದರಾಮಯ್ಯ, ವಿಶ್ವನಾಥ್ ಜೊತೆಗೆ ಪ್ರಚಾರಕ್ಕೆ ಒಪ್ಪಿರಲಿಲ್ವಂತೆ. ಸಿದ್ದರಾಮಯ್ಯರ ನಡೆಯಿಂದ ವಿಶ್ವನಾಥ್ ಬೇಸತ್ತಿದ್ರು ಎನ್ನಲಾಗಿತ್ತು.
ಸದ್ಯ, ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ಚು ಗೊಂದಲ ಕಾಣಿಸಿಕೊಳ್ಳುತ್ತಿದೆ. ಒಂದೆಡೆ, ಸಿಎಂ ಬದಲಾವಣೆ ಸುದ್ದಿ ಹರಿದಾಡುತ್ತಿದ್ರೆ, ಇನ್ನೊಂದೆಡೆ ಅತೃಪ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂಧರ್ಭದಲ್ಲಿ ಇವರಿಬ್ಬರ ಭೇಟಿ ತೀವ್ರ ಕುತೂಹಲ ಮೂಡಿಸಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಎಲ್ಲಾ ಅತೃಪ್ತರ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷರೇ ಬಿಜೆಪಿ ಸೇರುವರೆ ಎಂಬ ಪ್ರಶ್ನೆಯನ್ನ ಈ ಭೇಟಿ ಹುಟ್ಟು ಹಾಕಿದೆ.
Comments
Post a Comment