Breaking news !! ದೇಶಕ್ಕೆ ಮೋದಿ ಸರ್ಕಾರ ಬಿಟ್ಟರೆ ಮತ್ಯಾರು ಸರಿಯಾಗಿ ದೇಶ ನೋಡಿಕೊಳ್ಳಲಾರರು .. ಮತ್ತೆ ಅರಳಲಿದೆ ಕಮಲ


ಇತ್ತ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಮಾಧ್ಯಮಗಳು ಸೇರಿದಂತೆ ಕೆಲ ಸಂಸ್ಥೆಗಳು ಚುನಾವಣಾ ಸಮೀಕ್ಷೆಯಲ್ಲಿ ನಿರತರಾಗಿದ್ದು, ಅದ್ಯಾವ ಪಕ್ಷ 2019ರ ಚುನಾವಣಾ ಚುಕ್ಕಾಣಿಯನ್ನು ಏರಲಿದೆ ಅನ್ನೋದನ್ನು ಸಮೀಕ್ಷೆಯ ಮೂಲಕ ಬಹಿರಂಗ ಪಡಿಸಿವೆ. ಅದರಂತೆಯೇ ಇದೀಗ ಐ.ಎ.ಎನ್.ಎಸ್-ಸಿವೋಟರ್ ಚುನಾವಣಾ ಸಮೀಕ್ಷೆ ನಡೆಸಿದ್ದು, ಹದಿನೇಳನೇ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರಥ್ಯದ ಎನ್.ಡಿ.ಎ ಈ ಬಾರಿಯೂ ಅಧಿಕಾರದ ಚುಕ್ಕಾಣಿಯನ್ನೇರಲಿರುವುದು ಖಚಿತ ಎಂದು ತಿಳಿಸಿದೆ.

ಐ.ಎ.ಎನ್.ಎಸ್ ಸುದ್ದಿ ಸಂಸ್ಥೆಗಾಗಿ ಸಿವೋಟರ್ ನಡೆಸಿದ ಸಮೀಕ್ಷೆಯಲ್ಲಿ ಎನ್.ಡಿ.ಎ ಮೈತ್ರಿಕೂಟವು ಯುಪಿಎ ಮೈತ್ರಿಕೂಟಕ್ಕಿಂತ ಮುನ್ನಡೆ ಸಾಧಿಸಲಿದೆ ಎಂದು ತಿಳಿಸಿದೆ. ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟವು ಮಾಡಿಕೊಂಡಿರುವ ಚುನಾವಣಾ ಪೂರ್ವ ಹೊಂದಾಣಿಕೆಯಲ್ಲಿ ದೇಶದಾದ್ಯಂತ ಶೇಕಡ 42ರಷ್ಟು ಮತಗಳನ್ನು ಪಡೆದುಕೊಳ್ಳಲಿದೆಯಲ್ಲದೆ, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವು ಶೇಕಡ 30.4ರಷ್ಟು ಮತಗಳನ್ನು ಸೆಳೆಯಲಿದೆ ಎಂದು ಹೇಳಿದೆ.

ಇತ್ತೀಚೆಗಷ್ಟೇ, ಟೈಮ್ಸ್ ಗ್ರೂಪ್ ನಡೆಸಿದ ಮೆಗಾ ಆನ್ ಲೈನ್ ಪೋಲ್ ನಲ್ಲಿ ಮೂರನೇ ಎರಡಕ್ಕಿಂತಲೂ ಹೆಚ್ಚು ಮಂದಿ (ಶೇಕಡ 83) ಮೋದಿ ನೇತೃತ್ವದ ಎನ್.ಡಿ.ಎ ಸರಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದೆಯಲ್ಲದೇ, ಪ್ರಧಾನಿ ಮೋದಿ ಅವರ ವೈಯಕ್ತಿಕ ಜನಪ್ರಿಯತೆ ಅಧಿಕವಾಗಿರುವುದರಿಂದ ಇಂದೇ ಸಾರ್ವತ್ರಿಕ ಚುನಾವಣೆ ನಡೆಸಿದರೂ ಮೋದಿ ಅವರೇ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ ಎಂದು ಸಮೀಕ್ಷೆ ತಿಳಿಸಿತ್ತು. ಆದರೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಸಿವೋಟರ್-ಐ.ಎ.ಎನ್.ಎಸ್ ನಡೆಸಿದ ಸಮೀಕ್ಷೆಯಲ್ಲಿ ಎನ್.ಡಿ.ಎ 298 ಸ್ಥಾನ ಗಳಿಸಲಿರುವ ಮೂಲಕ ಎನ್.ಡಿ.ಎ ಮತ್ತೊಮ್ಮೆ ಅಧಿಕಾರದ ಗದ್ದುಗೆಯನ್ನೇರುವುದು ಖಚಿತ ಎಂದು ತಿಳಿಸಿದೆ.

ಇನ್ನು, ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಇಬ್ಬರಿಗೂ ಸಮಾನ ಅವಕಾಶಗಳಿವೆ. ತಮಿಳುನಾಡು, ಕೇರಳದಲ್ಲಿ ಎನ್.ಡಿ.ಎ ಹಿಂದುಳಿದಿದೆ ಎಂದೂ ಸಮೀಕ್ಷೆ ತಿಳಿಸಿದೆ. ಈ ಹಿಂದಿನ ಸಮೀಕ್ಷೆಯಲ್ಲಿ ಸಿವೋಟರ್, ಎನ್.ಡಿ.ಎ 261 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿತ್ತು. ಆದರೆ ಎರಡನೇ ಸಮೀಕ್ಷೆಯಲ್ಲಿ ಬಿಜೆಪಿ ಒಂದೇ 241 ಸೀಟುಗಳಲ್ಲಿ ಸ್ವಂತ ಬಲದಲ್ಲಿ ಜಯಭೇರಿ ಬಾರಿಸಲಿದೆ ಹಾಗೂ ಚುನಾವಣೆಯ ನಂತರದ ಮೈತ್ರಿಯ ನಂತರ ಎನ್.ಡಿ.ಎ ಯ ಸ್ಥಾನ 298ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಿದೆ. ಹಾಗಾಗಿ ಇದಕ್ಕೆ ಬಾಲಾಕೋಟ್ ಉಗ್ರ ಶಿಬಿರಗಳ ಮೇಲೆ ನಡೆಸಿದ ದಾಳಿಯೂ ಕಾರಣವಾಗಿದೆ ಎನ್ನಲಾಗಿದೆ.

ಐ.ಎ.ಎನ್.ಎಸ್ ಸುದ್ದಿಸಂಸ್ಥೆ ಸಹಭಾಗಿತ್ವದಲ್ಲಿ ಸಿವೋಟರ್ ಸಂಸ್ಥೆ “ಈ ನೇಷನ್ ಮಾರ್ಚ್ 2019 ವೇವ್ ಟು ಒಪೀನಿಯನ್ ಪೆÇೀಲ್” ಎಂಬ ಶೀರ್ಷಿಕೆಯಡಿಯಲ್ಲಿ ಸಮೀಕ್ಷೆ ನಡೆಸಿದ್ದು, ಇದಕ್ಕಾಗಿ ಈ ವಾರದ 10,280 ಮಾದರಿಗಳೂ ಸೇರಿದಂತೆ ದೇಶಾದ್ಯಂತ ಒಟ್ಟು 70,000ಕ್ಕೂ ಅಧಿಕ ಮಂದಿಯಿಂದ ಪ್ರತಿಕ್ರಿಯೆ ಪಡೆದಿದೆ. ಕಳೆದ ಜನವರಿ 1 ರಿಂದ ಈ ವರೆಗೂ ಸುಮಾರು 543 ಕ್ಷೇತ್ರಗಳಲ್ಲಿ ಈ ಸರ್ವೆ ನಡೆಸಲಾಗಿದೆ. 2014ರ ಚುನಾವಣೆಗೆ ಹೋಲಿಸಿದರೆ ಎನ್.ಡಿ.ಎ ಮೈತ್ರಿಕೂಟ ಬಹಳ ಕಡಿಮೆ ಮತಗಳನ್ನು ಪಡೆದುಕೊಳ್ಳಲಿದೆ ಎಂದು ಸಿವೋಟರ್ ಸಮೀಕ್ಷೆ ತಿಳಿಸಿದೆ.

ಬಿಹಾರದಲ್ಲಿ ಎನ್.ಡಿ.ಎ ಮತ ಹಂಚಿಕೆಯು ಶೇಕಡ 52.6ರಷ್ಟನ್ನು ನಿರೀಕ್ಷಿಸಿದರೆ, ರಾಜಸ್ಥಾನದಲ್ಲಿ ಎನ್.ಡಿ.ಎಗೆ ಶೇಕಡ 50.7ರಷ್ಟು ಮತಗಳು ದೊರಕಲಿವೆ. ಬಿಜೆಪಿ ಅತ್ಯಂತ ಪ್ರಬಲವಾಗಿರುವ ಗುಜರಾತ್ ನಲ್ಲಿ ಎನ್.ಡಿ.ಎಗೆ ಶೇಕಡ 58.2ರಷ್ಟು ಮತಗಳು ಲಭ್ಯವಾಗಲಿವೆ. ಮಹಾರಾಷ್ಟ್ರದಲ್ಲಿ ಎನ್.ಡಿ.ಎಗೆ ಶೇಕಡ 48.1ರಷ್ಟು ಮತ್ತು ಹರಿಯಾಣದಲ್ಲಿ ಶೇಕಡ 42.6ರಷ್ಟು ಮತಗಳು ಸಿಗಲಿವೆ. ಇನ್ನು, ಸೀಟು ಹಂಚಿಕೆ ವಿಚಾರದಲ್ಲಿ ಯುಪಿಎ, ಎನ್.ಡಿ.ಎಗಿಂತ ಹಿನ್ನಡೆ ಅನುಭವಿಸಲಿದೆ. ಕರ್ನಾಟಕದಲ್ಲಿ ಜೆಡಿಎಸ್, ಬಿಹಾರದಲ್ಲಿ ಆರ್.ಜೆ.ಡಿ, ಜಾರ್ಖಂಡ್‍ನಲ್ಲಿ ಜೆಎಂಎಂ, ಕೇರಳದಲ್ಲಿ ಯುಡಿಎಫ್, ಮಹಾರಾಷ್ಟ್ರದಲ್ಲಿ ಎನ್.ಸಿ.ಪಿ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಜತೆಗೂಡಿ ಸ್ಪರ್ಧಿಸಿದರೂ ಕೇವಲ 143 ಸೀಟುಗಳನ್ನು ಅದು ಪಡೆದುಕೊಳ್ಳಲಿದೆ. ಕಾಂಗ್ರೆಸ್ ಒಟ್ಟು 91 ಸೀಟುಗಳನ್ನು ತನ್ನ ಹೆಸರಿಗೆ ಪಡೆದುಕೊಂಡರೆ, 52 ಸೀಟುಗಳು ಅದರ ಮೈತ್ರಿಪಕ್ಷಗಳಿಗೆ ಸಿಗಲಿದೆ. ಇದಕ್ಕೂ ಮೊದಲು ನಡೆಸಿದ್ದ ಸಮೀಕ್ಷೆಯಲ್ಲಿ ಕಾಂಗ್ರೆಸ್ 86 ಮತ್ತು ಅದರ ಮಿತ್ರಪಕ್ಷಗಳು 55 ಸೀಟುಗಳನ್ನು ಪಡೆದುಕೊಳ್ಳಲಿವೆ ಎಂದು ತಿಳಿಸಲಾಗಿತ್ತು. ಆದರೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ನಡೆಸಿದ ಸಮೀಕ್ಷೆಯಲ್ಲಿ ಮೋದಿಜೀ ನೇತೃತ್ವದ ಎನ್.ಡಿ.ಎ ಈ ಬಾರಿಯೂ ಜಯಭೇರಿ ಭಾರಿಸಲಿರುವುದು ಖಚಿತ ಎಂದಿದೆ

Comments