ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಪಕ್ಷಾಂತರ ನಿಷೇಧ ಮಸೂದೆ ಉಲ್ಲಂಘಿಸಿದ ಕಾರಣ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದಾರೆ.
ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ ಕುಮಟಳ್ಳಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಂಡಿದ್ದ ಕೆಪಿಜೆಪಿ ಶಾಸಕ ಆರ್. ಶಂಕರ್ ಅವರನ್ನು ಅನರ್ಹಗೊಳಿಸಲಾಗಿದೆ. ಉಳಿದ ಶಾಸಕರ ಮೇಲೆಯೂ ತೂಗುಕತ್ತಿ ಇದ್ದು ಅನರ್ಹಗೊಂಡರೆ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂಬ ಭೀತಿಯಿಂದ ಒಂದಿಷ್ಟು ಅತೃಪ್ತ ಶಾಸಕರು ವಾಪಸ್ ಬರಲು ಮುಂದಾಗಿದ್ದಾರೆ ಎನ್ನಲಾಗಿದೆ.
ಉಳಿದ ಶಾಸಕರ ಬಗ್ಗೆಯೂ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದು, ದೋಸ್ತಿ ನಾಯಕರು ಪ್ರಯೋಗಿಸಿದ ಅನರ್ಹತೆ ಅಸ್ತ್ರ ಯಶಸ್ವಿಯಾಗಿದೆ. ಅನರ್ಹತೆ ಭೀತಿಯಿಂದ ಪಾರಾಗಲು ಕೆಲವು ಅತೃಪ್ತ ಶಾಸಕರು ತಮ್ಮ ನಾಯಕರನ್ನು ಸಂಪರ್ಕಿಸಿ ವಾಪಸ್ ಬರುವ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.

Comments
Post a Comment