ನೂತನ ಸಚಿವ ಸಂಪುಟದಲ್ಲಿ ಹೊಸ ಹುದ್ದೆ , ಪ್ರಥಮ ಬಾರಿಗೆ ಈ ಹುದ್ದೆ ಪಡೆದ ಜಗದೀಶ್ ಶೆಟ್ಟರ್


ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧವಾಗಿರುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಪ್ರಮುಖ ಹುದ್ದೆ ಸಿಗುತ್ತದೆ ಎಂಬ ಊಹಾಪೋಹಗಳು ಕೇಳಿಬರುತ್ತಿದೆ.

ಬಿ ಎಸ್ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಲಿಂಗಾಯತ ಸಮುದಾಯದ ಪ್ರಬಲ ಮುಖಂಡರು. ಜಗದೀಶ್ ಶೆಟ್ಚರ್ ತಮಗೆ ಪೈಪೋಟಿ ನಾಯಕ ಎಂಬುದು ಯಡಿಯೂರಪ್ಪನವರಿಗೆ ಸಹ ಗೊತ್ತಿದೆ. ಇದಕ್ಕಾಗಿಯೇ 2008ರಲ್ಲಿ ಬಿ ಎಸ್ ಯಡಿಯೂರಪ್ಪನವರು ತಮ್ಮ ಸಂಪುಟದಲ್ಲಿ ಜಗದೀಶ್ ಶೆಟ್ಟರ್ ಗೆ ಸಚಿವ ಸ್ಥಾನ ಸಿಗದಂತೆ ಮಾಡಿ ಸಕ್ರಿಯ ರಾಜಕಾರಣದಿಂದ ದೂರವಿರಿಸಲು ಸ್ಪೀಕರ್ ಸ್ಥಾನವನ್ನು ನೀಡಿದ್ದರು ಎಂದು ಹೇಳಲಾಗುತ್ತಿದೆ.

2009ರಲ್ಲಿ ಬಿಜೆಪಿ ಸರ್ಕಾರದಲ್ಲಿ ಶೆಟ್ಟರ್ ಅವರಿಗೆ ಅಂದಿನ ರಾಜಕೀಯ ಸನ್ನಿವೇಶದೊಳಗೆ ಸಚಿವ ಹುದ್ದೆ ನೀಡಲಾಯಿತು.

Comments