ಉಪಚುನಾವಣೆ: ಒಂದೇ ಕಲ್ಲಿಗೆ ಹಲವು ನಾಯಕರನ್ನು ಉರುಲಿಸಿದ ಸಿದ್ದು!! ಇದು ಬಿಜೆಪಿಗೆ ದೊಡ್ಡ ಏಟು!

ಉಪ ಚುನಾವಣೆಯಲ್ಲಿ ಗೆದ್ದು ಬೀಗಲು ಕಾಂಗ್ರೆಸ್ ಹೋಂವರ್ಕ್ ನಡೆಸಿದೆ. ಉಪಚುನಾವಣೆಗೆ ಸಿದ್ದರಾಮಯ್ಯ ಸಾಮೂಹಿಕ ನಾಯಕತ್ವದ ಜಪ ಮಾಡುತ್ತಿದ್ದಾರೆ. ಆದರೆ, ಉಪಚುನಾವಣೆಯನ್ನು ಸಿದ್ಧರಾಮಯ್ಯ ಹೆಗಲಿಗೆ ಕಟ್ಟಲು ಕಾಂಗ್ರೆಸ್ ಹಿರಿಯ ನಾಯಕರು ತಯಾರಿ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ನಲ್ಲಿ ಉಪ ಚುನಾವಣೆಯ ತಂತ್ರ-ಪ್ರತಿತಂತ್ರ ರೂಪಿಸಲಾಗುತ್ತಿದೆ. ಹಿರಿಯ ನಾಯಕರ ತಂತ್ರಕ್ಕೆ ಸಿದ್ದರಾಮಯ್ಯ ಪ್ರತಿ ತಂತ್ರ ರೂಪಿಸುತ್ತಿದ್ದಾರೆ. ಸಿದ್ಧರಾಮಯ್ಯ ಹೇಳಿದವರಿಗೆ ಟಿಕೆಟ್ ಖಚಿತವಾಗಿರುವುದರಿಂದ ಅವರಿಗೇ ಜವಾಬ್ದಾರಿ ನೀಡಬೇಕೆಂದು ಹಿರಿಯ ನಾಯಕರು ಹೇಳಿದ್ದಾರೆ ಎನ್ನಲಾಗಿದೆ.

ತಾವೇ ಜವಾಬ್ದಾರಿ ಹೊತ್ತುಡರೆ ಹಿನ್ನಡೆಯಾದ ಸಂದರ್ಭದಲ್ಲಿ ತಮಗೇ ಹೊಣೆ ಹೊರಿಸಬಹುದೆಂಬ ಕಾರಣದಿಂದ ಸಿದ್ಧರಾಮಯ್ಯ ಮುಂಚೂಣಿ ನಾಯಕರಿಗೆ ಪ್ರಚಾರದ ನೇತೃತ್ವ ವಹಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಜಂಟಿ ಪ್ರಚಾರದ ಮೂಲಕ ಎಲ್ಲರಿಗೂ ಚುನಾವಣೆಯ ಜವಾಬ್ದಾರಿ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಡಾ.ಜಿ. ಪರಮೇಶ್ವರ, ಕೃಷ್ಣ ಭೈರೇಗೌಡ, ಎಸ್.ಆರ್. ಪಾಟೀಲ್ ಸೇರಿದಂತೆ ಪ್ರಮುಖ ನಾಯಕರಿಗೆ ಉಪ ಚುನಾವಣೆ ಕ್ಷೇತ್ರಗಳ ಜವಾಬ್ದಾರಿ ನೀಡಲಿದ್ದಾರೆ ಎನ್ನಲಾಗಿದೆ.

ಹಿರಿಯ ನಾಯಕರಿಗೆ ಚುನಾವಣೆ ಕ್ಯಾಂಪೇನ್ ಗೆ ಸಿದ್ದರಾಮಯ್ಯ ತಂಡ ರಚಿಸಿದ್ದಾರೆ. ತಮ್ಮ ಜೊತೆ ಪಕ್ಷದ ಪ್ರಮುಖ ನಾಯಕರು ಪ್ರಚಾರಕ್ಕೆ ಬರಬೇಕು. ಕ್ಷೇತ್ರವಾರು ಚುನಾವಣಾ ಉಸ್ತುವಾರಿ ಹೊರಬೇಕು ಎಂದು ಹೇಳಿದ್ದಾರೆ ಆದರೆ, ಸಿದ್ದರಾಮಯ್ಯನವರಿಗೇ ಉಪಚುನಾವಣೆ ಜವಾಬ್ದಾರಿ ಹೊರಿಸಲು ಪಕ್ಷದ ಹಿರಿಯ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.

Comments