ಬಿಜೆಪಿ ತೊರೆದು ಕಾಂಗ್ರೆಸ್ ಗೆ ಎಂಟ್ರಿ ಕೊಟ್ಟ ಬಿಜೆಪಿಯ ಬಲಿಷ್ಠ ನಾಯಕ! ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಗ್ಯರಂಟೀ!! ಮತ್ತಷ್ಟು ಬಲಿಷ್ಠವಾಯ್ತು ಕಾಂಗ್ರೆಸ್!


ನಾಳೆಯೇ ಪಕ್ಷಕ್ಕೆ ರಾಜೀನಾಮೆ, ನವೆಂಬರ್​​ 13ರಂದು ಕಾಂಗ್ರೆಸ್​​ ಸೇರುತ್ತೇನೆ: ಬಿಜೆಪಿ ಮಾಜಿ ಶಾಸಕ ರಾಜು ಕಾಗೆಕಾಂಗ್ರೆಸ್​ ನಾಯಕರನ್ನು ಭೇಟಿಯಾಗಿದ್ದು, ಪಕ್ಷದಿಂದ ಟಿಕೆಟ್​ ನೀಡುವ ಭರವಸೆ ಸಿಕ್ಕಿದೆ. ಈಗ ಬಿಜೆಪಿಯವರು ಎಷ್ಟೇ ಮನವೊಲಿಸುದರೂ ಪ್ರಯೋಜನವಿಲ್ಲ. ಎಲ್ಲವೂ ನಿರ್ಧಾರವಾಗಿದೆ. ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಸಿಎಂ ಪದವಿ ಕೊಟ್ಟರು ನಾನು ಮರಳಿ ಬಜೆಪಿಗೆ ಸೇರುವುದಿಲ್ಲ
ಬೆಂಗಳೂರು (ನ.11): ಈಗಾಗಲೇ ನಾನು ಬಿಜೆಪಿಯಿಂದ ಹೊರ ಬಂದಿದ್ದೇನೆ. ನಾಳೆ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದು, ನ.13ರಂದು ಕಾಂಗ್ರೆಸ್​ಗೆ ಅಧಿಕೃತವಾಗಿ ಸೇರ್ಪಡನೆಯಾಗುತ್ತೇನೆ ಎಂದು ಬಿಜೆಪಿ ಬಂಡಾಯನಾಯಕ ರಾಜು ಕಾಗೆ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ನ್ಯೂಸ್​ 18 ಕನ್ನಡದೊಂದಿಗೆ ಮಾತನಾಡಿರುವ ಅವರು, ಈಗಾಗಲೇ ಕಾಂಗ್ರೆಸ್​ ನಾಯಕರಾದ ಡಿಕೆ ಶಿವಕುಮಾರ್​, ಸಿದ್ದರಾಮಯ್ಯ, ದಿನೇಶ್​ ಗುಂಡೂರಾವ್​ ಭೇಟಿಯಾಗಿದ್ದು. ಪಕ್ಷ ಸೇರ್ಪಡನೆ ಕುರಿತು ಮಾತನಾಡಿದ್ದೇನೆ. ಕಾಂಗ್ರೆಸ್​ ನಾಯಕರು ಟಿಕೆಟ್​ ನೀಡುವ ಭರವಸೆ ನೀಡಿದ್ದು, ಕಾಂಗ್ರೆಸ್​ ಪಕ್ಷ ಸೇರುತ್ತೇನೆ ಎಂದಿದ್ದಾರೆ.
ಕಾಗವಾಡ ಕ್ಷೇತ್ರದಲ್ಲಿ ಪಕ್ಷ ಅನರ್ಹ ಶಾಸಕ ಶ್ರೀಮಂತಗೌಡ ಪಾಟೀಲ್​ಗೆ ಟಿಕೆಟ್​ ನೀಡಲು ಮುಂದಾಗಿರುವ ಹಿನ್ನೆಲೆ ಕ್ಷಿಪ್ರ ರಾಜಕೀಯಕ್ಕೆ ಮುಂದಾದ ರಾಜು ಕಾಗೆ ಈ ನಿರ್ಧಾರ ಪ್ರಕಟಿಸಿದ್ದಾರೆ. ಈಗ ನಾನು ಮನೆಯಲ್ಲಿ ಕೂತರೆ ಜೀವನಪರ್ಯಂತ ಮನೆಯಲ್ಲಿಯೇ ಕೂರಬೇಕಾಗುತ್ತದೆ. ಕಳೆದ ಬಾರಿ ಕಡಿಮೆ ಅಂತರಗಳಿಂದ ಸೋತಿದ್ದೇನೆ. ಈಗ ಪಕ್ಷ ಟಿಕೆಟ್​ ನೀಡಲು ನಿರಾಕರಿಸಿದೆ. ಈ ಕುರಿತು ಯಡಿಯೂರಪ್ಪ ಕೂಡ ಒಮ್ಮೆ ಮಾತುಕತೆ ನಡೆಸಿದರು.


Comments