ಮತ್ತೆ ಕಾಂಗ್ರೆಸ್- ಜೆಡಿಎಸ್ ಮೈತ್ರಿಗೆ ಮುಂದಾದ ಸಿದ್ದರಾಮಯ್ಯ !! ಉಪಚುನಾವಣೆ ಗೆದ್ದರೆ ನಾನೇ ಸಿಎಂ ಎಂದ ಜೆಡಿಎಸ್ ನಾಯಕ


ಲೋಕಸಭೆ ಚುನಾವಣೆಯಲ್ಲಿ ಮುಗ್ಗರಿಸಿ, ಮೈತ್ರಿ ಸರ್ಕಾರ ಮುರಿದು ಬಿದ್ದ ನಂತರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುರಿದು ಬಿದ್ದಿದೆ. ಆದರೆ ಇದಕ್ಕೆ ಮತ್ತೆ ಜೀವ ನೀಡುವ ಸಣ್ಣ ಸುಳಿವೊಂದನ್ನು ಸಿದ್ದರಾಮಯ್ಯ ಅವರೇ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿರುವ ಸಿದ್ದರಾಮಯ್ಯ, 'ಜೆಡಿಎಸ್ ಮತ್ತು ಕಾಂಗ್ರೆಸ್ ಭಿನ್ನ ಹಾದಿಯಲ್ಲಿದ್ದೇವೆ, ಆದರೆ ನಮ್ಮ ಗುರಿ ಒಂದೇ, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದೇ ನಮ್ಮ ಗುರಿ' ಎಂದು ಹೇಳಿದ್ದಾರೆ. ಇದೇ ಮಾದರಿಯ ಮಾತುಗಳನ್ನು ಮೈತ್ರಿ ಸರ್ಕಾರ ರಚನೆ ಸಮಯದಲ್ಲಿಯೂ ಸಿದ್ದರಾಮಯ್ಯ ಆಡಿದ್ದರು.

'ಬಿಜೆಪಿ ಅಭ್ಯರ್ಥಿಯನ್ನು, ಅನರ್ಹರನ್ನು ಸೋಲಿಸಲು ಜೆಡಿಎಸ್‌ ನವರು ಕಾಂಗ್ರೆಸ್‌ಗೆ ಬೆಂಬಲಿಸಿದರೆ ತಪ್ಪೇನಿದೆ?' ಎಂದು ಸಿದ್ದರಾಮಯ್ಯ ಇಂದು ಪ್ರಶ್ನೆ ಮಾಡಿದ್ದಾರೆ.

ಕನ್ನಡಿಗರು ಪಕ್ಷಾಂತರ ಸಹಿಸುವುದಿಲ್ಲ: ಸಿದ್ದರಾಮಯ್ಯ
ಬಿಜೆಪಿ ಕನಿಷ್ಟ 8 ಸ್ಥಾನ ಗೆಲ್ಲಬೇಕು ಆದರೆ ಅದು ಸಾಧ್ಯವಿಲ್ಲ: ಸಿದ್ದರಾಮಯ್ಯ
'ಯಡಿಯೂರಪ್ಪ ಸರ್ಕಾರಕ್ಕೆ ಬಹುಮತ ಇಲ್ಲ. ಅವರ ಬಳಿ 105 ಸ್ಥಾನಗಳಷ್ಟೆ ಇವೆ. ಬಹುಮತ ಪಡೆಯಲು ಕನಿಷ್ಟ ಎಂಟು ಸ್ಥಾನಗಳನ್ನು ಅವರು ಗೆಲ್ಲಲೇಬೇಕಿದೆ' ಆದರೆ ಅದು ಸಾಧ್ಯವಿಲ್ಲ, ಕರ್ನಾಟಕದ ಜನರು ಪಕ್ಷಾಂತರವನ್ನು ಸಹಿಸುವುದಿಲ್ಲ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅನರ್ಹ ಶಾಸಕರ ಮೇಲೆ ಸಿದ್ದರಾಮಯ್ಯ ವಾಗ್ದಾಳಿ
'ಅನರ್ಹ' ಹಣೆಪಟ್ಟಿ ಕಟ್ಟಿದ್ದು ನಾನಲ್ಲ, ಸುಪ್ರೀಂಕೋರ್ಟ್: ಸಿದ್ದರಾಮಯ್ಯ
'ಪ್ರಸ್ತುತ ಬಿಜೆಪಿ ಅಭ್ಯರ್ಥಿಗಳಿಗೆ 'ಅನರ್ಹ' ಹಣೆಪಟ್ಟಿಯನ್ನು ನಾನು ಕಟ್ಟಿಲ್ಲ, ಸುಪ್ರೀಂಕೋರ್ಟ್ ಅವರಿಗೆ 'ಅನರ್ಹ' ಹಣೆಪಟ್ಟಿ ಕಟ್ಟಿದೆ' ಎಂದು ಅನರ್ಹ ಶಾಸಕರ ಮೇಲೆ ಸಿದ್ದರಾಮಯ್ಯ ಗುಡುಗಿದರು.

Comments