ಹೊಸಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಎಂಟಿಬಿ ನಾಗರಾಜ್ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ.
ಹೊಸಕೋಟೆ ತಾಲೂಕು ಸತ್ಯವಾರ ಗ್ರಾಮದಲ್ಲಿ ಚುನಾವಣೆ ಪ್ರಚಾರದ ವೇಳೆ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ನಾನು ಮುಂದಿನ ಚುನಾವಣೆಯಲ್ಲಿ ನಿಲ್ಲಲ್ಲು ಸಾಧ್ಯವಿಲ್ಲ. ಈಗ ನನ್ನಗೆ 69 ವರ್ಷ ವಯಸ್ಸು. ಮುಂದಿನ ಚುನಾವಣೆಗೆ ನನ್ನಗೆ 74 ವರ್ಷ ವಯಸ್ಸಾಗುತ್ತೆ. 74 ವರ್ಷ ಆದ ಮೇಲೆ ಕೆಲಸ ಮಾಡೋಕ್ಕೆ ಆಗೋಲ್ಲ. ನಾನು ರಾಜಕೀಯವಾಗಿ ರಿಟರ್ಡ್ ಆದ್ರೆ ನನ್ನ ಮಗ ಇದ್ದಾನೆ. ಚುನಾವಣೆಯಲ್ಲಿ ಓಡಾಡುತ್ತಿದ್ದಾನೆ. ಸುಮ್ಮನೆ ಎಂಎಲ್‌ಎ ಆಗಿ ಮನೆಯಲ್ಲಿ ಕುಳಿತುಕೊಳ್ಳಕ್ಕೆ ಎಂಎಲ್‌ಎ ಆಗೋದಿಲ್ಲ. ನನ್ನ ಮುಂದಿನ ತಲೆಮಾರು ನನ್ನ ಮಗ ಇದ್ದಾನೆ ಎಂದು ಹೇಳಿದ್ದಾರೆ.
ನಾನು ಯಾವತ್ತು ಯಾರಿಗೂ ಉಂಗುರ, ಬೆಳ್ಳಿ ಇನ್ನೊಂದು ಏನು ಕೊಟ್ಟಿಲ್ಲ.
Comments
Post a Comment