ಡಿಕೆಶಿ ಬಲಿಷ್ಟತೆ ಕಂಡು ಶಿವಕುಮಾರ್ ಗೆ ಹೊಸ ಹುದ್ದೆ ನೀಡಿದ ಕಾಂಗ್ರೆಸ್ ಹೈಕಮಾಂಡ್ !! ಡಿಕೆಶಿ ಕಂಡು ಹೆದರಿದ ಯಡಿಯೂರಪ್ಪ


ತಿಹಾರ್ ಜೈಲಿನಿಂದ ಮೊನ್ನೆಯಷ್ಟೇ ಬಿಡುಯಾಗಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್‌ಗೆ ಪಕ್ಷವು ದೊಡ್ಡ ಜವಾಬ್ದಾರಿ ನೀಡಲು ಮುಂದಾಗಿದೆ.

ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್  ರಣತಂತ್ರವನ್ನು ಹೆಣೆದಿದ್ದು,  ಡಿಕೆಶಿಗಾಗಿ ಬೃಹತ್ ರಾಜಕೀಯ ವೇದಿಕೆಯನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಡಿಕೆಶಿಯನ್ನು ಕಳೆದ ತಿಂಗಳು ಬಂಧಿಸಿದ್ದರು. ಕಳೆದ ಬುಧವಾರ ದೆಹಲಿ ಹೈಕೋರ್ಟ್ ಅವರಿಗೆ  ಜಾಮೀನು ನೀಡಿ ಬಿಡುಗಡೆ ಮಾಡಿತ್ತು
Image result for dk shivakumar sonia gandhi meet
ಜೈಲಿನಿಂದ ಬಿಡುಗಡೆಯಾದ ಬಳಿಕ ಇಂದು ಡಿಕೆಶಿ ಅವರು ಎಐಸಿಸಿ ಕಚೇರಿಗೆ ತೆರಳಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವು ಮುಖಂಡರನ್ನು ಭೇಟಿಯಾಗಿದ್ದರು.

ಆ ಬಳಿಕ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿದ ಡಿಕೆಶಿ ಅವರು ಕಾಂಗ್ರೆಸ್ ಅಧಿನಾಯಕಿಯನ್ನು ಭೇಟಿಯಾದರು.

ಡಿಕೆ ಶಿವಕುಮಾರ್‌ಗೆ ದೀಪಾವಳಿ ಡಬ್ಬಲ್ ಧಮಾಕ. ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾಮೀನು ಸಿಗುತ್ತಿದ್ದಂತೆಯೇ ಡಿಕೆಶಿಗೆ ಮಹತ್ವದ ಹುದ್ದೆ ನೀಡಲು ಕಾಂಗ್ರೆಸ್‌ ತೀರ್ಮಾನಿಸಿದೆ.  ಡಿಕೆ ಶಿವಕುಮಾರ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.

Image result for kpcc karnataka

Comments