ಕೋಟೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ ಭಾನುವಾರ ಕೋಟೇಶ್ವರ ಸರಕಾರಿ ಶಾಲೆಯಲ್ಲಿ ನಡೆದಿದ್ದು ಸಂಜೆ 4 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿದು ಬಳಿಕ ಮತ ಎಣಿಕೆ ಕಾರ್ಯ ನಡೆದಿದ್ದು ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ
ಇಪ್ಪತ್ತು ವರ್ಷಗಳ ಬಳಿಕ ನಡೆದ ಕೋಟೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ ಇದಾಗಿದ್ದು ಇಷ್ಟು ವರ್ಷವೂ ರಾಜಿ ನಡೆದು ಕಾಂಗ್ರೆಸ್ ಆಡಳಿತವಿತ್ತು. ಹಲವು ವರ್ಷಗಳ ಬಳಿಕ ಕೋಟೇಶ್ವರ ವಿ.ಎಸ್.ಎಸ್. ಸೊಸೈಟಿಗೆ ಈ ಬಾರಿ 13 ಸ್ಥಾನಕ್ಕೆ ಚುನಾವಣೆ ನಡೆದಿದ್ದು ಬಾರೀ ಜಿದ್ದಾಜಿದ್ದಿ ನಡೆದಿತ್ತು. ಅರುಣ್ ಕುಮಾರ್ ಎಸ್.ವಿ. ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಕಾಂಗ್ರೆಸ್ ಭದ್ರಕೋಟೆ ಕೋಟೇಶ್ವರದಲ್ಲಿ 20 ವರ್ಷಗಳ ನಂತರ ಅಭೂತಪೂರ್ವ ಜಯ ಸಾಧಿಸಿದ ಬಿಜೆಪಿ
Comments
Post a Comment