ಸಚಿವ ಸ್ಥಾನ ಹಂಚಿಕೆ ಬೆನ್ನಲ್ಲೇ ರಾಜೀನಾಮೆ ಕೊಟ್ಟ 3 ಜನ ಬಿಜೆಪಿ ಶಾಸಕರು !! ಕರ್ನಾಟಕ ರಾಜ್ಯ ರಾಜಕೀಯದಲ್ಲಿ ತಳಮಳ




ಬೆಂಗಳೂರು:ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮೂಲಗಳ ಪ್ರಕಾರ ಕೆಲವು ಸಚಿವರು ಈ ಖಾತೆಯನ್ನು ಬೇಡ ಎಂದು ರಾಜೀನಾಮೆಗೆ ಮುಂದಾಗಿದ್ದಾರೆಂದು ತಿಳಿದು ಬಂದಿದೆ.

ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ ಬೆನ್ನಲ್ಲೇ ಆರ್ ಅಶೋಕ್ ಸಿಟಿ ರವಿ ಸೇರಿದಂತೆ ಹಲವಾರು ಸಚಿವರುಗಳು ಬಂಡಾಯದ ಕಹಳೆ ಮೊಳಗಿಸಿದ್ದಾರೆ.

ಬಿಎಸ್ವೈ ಸರ್ಕಾರದಲ್ಲಿ ಭಿನ್ನಮತ ಸ್ಫೋಟ; ಖಾತೆ ಹಂಚಿಕೆಯಾದ ಗಂಟೆಯಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ.ಟಿ.ರವಿ!
ಬಿ.ಎಸ್. ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆಯಾದ ತಕ್ಷಣದಲ್ಲೇ ಭಿನ್ನಮತ ಸ್ಪೋಟಗೊಂಡಿದೆ. ಪ್ರಮುಖ ಖಾತೆ ಸಿಗದ ಹಿನ್ನೆಲೆಯಲ್ಲಿ ಹಾಗೂ ಖಾತೆಗಳ ಅಸಮರ್ಪಕ ಹಂಚಿಕೆಯಿಂದ ಅಸಮಾಧಾನಗೊಂಡ ಸಿ.ಟಿ.ರವಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಚಿವರೆಲ್ಲರನ್ನು ಕರೆಸಿಕೊಂಡು ಸಂಧಾನ ಸಭೆಯಲ್ಲಿ ತೊಡಗಿದ್ದಾರೆ. ಕೆಲವರು ಅದಕ್ಕೆ ಸುತರಾಂ ಒಪ್ಪುತ್ತಿಲ್ಲ ಎಂದು ತಿಳಿದು ಬಂದಿದ್ದುತ್ತು ಈ ಬೆಳವಣಿಗೆ ನಡೆಯುತ್ತಿವೇ ಸಿ.ಟಿ.ರವಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸೋಮವಾರ ಸಂಜೆಯಷ್ಟೇ ಸಿ.ಟಿ.ರವಿ ಅವರಿಗೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಖಾತೆಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ತಮಗೆ ಪ್ರಮುಖವಲ್ಲದ ಖಾತೆ ಹಂಚಿಕೆ ಮಾಡಿರುವುದರಿಂದ ಅಸಮಾಧಾನಗೊಂಡ ಸಿ.ಟಿ.ರವಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Image result for yeddyurappa cabinet
ಸಿಎಂ ಯಡಿಯೂರಪ್ಪ ಅವರಿಗೆ ರಾಜೀನಾಮೆ ಪತ್ರ ರವಾನಿಸಿರುವ ಸಿ.ಟಿ.ರವಿ, ನನ್ನ ರಾಜೀನಾಮೆಯನ್ನು ಸ್ವೀಕರಿಸಿ, ಈ ಸ್ಥಾನವನ್ನು ಅಸಮಾಧಾನಿತ ಶಾಸಕರು ಹಾಗೂ ಸಚಿವಾಕಾಂಕ್ಷಿಗಳಿಗೆ ನೀಡಿ ಎಂದು ಪತ್ರದಲ್ಲಿ ಹೇಳಿದ್ದಾರೆ.

ಸಂಘಟನೆಗಳ ಎಚ್ಚರಿಕೆ

ಕೆ.ಎಸ್.ಈಶ್ವರಪ್ಪ ಮತ್ತು ಬಿ.ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡದೆ ಇರುವುದಕ್ಕೆ ಸಮುದಾಯ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈಶ್ವರಪ್ಪ ಅವರ ಪರ ರಾಯಣ್ಣ ಬ್ರಿಗೇಡ್ ಹಾಗೂ ಶ್ರೀರಾಮುಲು ಪರ ವಾಲ್ಮೀಕಿ ಸಮುದಾಯದವರು ದನಿ ಎತ್ತಿದ್ದು, ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ತಮ್ಮ ಮುಖಂಡರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿವೆ. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿವೆ.

Comments