ಕಾಂಗ್ರೆಸ್ ಪಕ್ಷದ ಬೆನ್ನೆಲುಬು ಆದ ಬಲಿಷ್ಠ ನಾಯಕ, ಸಿದ್ದರಾಮಯ್ಯ ಅವರ ಬಲಗೈ ಬಂಟ ಬಿಜೆಪಿ ಸೇರಲು ಸಿದ್ಧತೆ


ಮೂಲ ಕಾಂಗ್ರೆಸಿಗ ಹಾಗೂ ಪಕ್ಷದ ನಿಷ್ಠಾವಂತ ನಾಯಕರಲ್ಲಿ ಒಬ್ಬರು ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ್. ಆದರೆ ಈಗ ಪರಮೇಶ್ವರ್ ಕಾಂಗ್ರೆಸ್ ಗೆ ಕೈಕೊಟ್ಟು ಕಮಲ ಹಿಡಿಯುತ್ತಾರಾ? ಅನ್ನೋ ಚರ್ಚೆ ಸದ್ಯ ರಾಜ್ಯ ರಾಜಕೀಯದಲ್ಲಿ ಹುಟ್ಟಿರುವ ಹೊಸ ಚರ್ಚೆ. ತಮ್ಮ ತಂದೆ ಕಾಲದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಡಾ. ಜಿ ಪರಮೇಶ್ವರ್, ದಲಿತ ಸಮುದಾಯದ ನಾಯಕನಾಗಿ ಬೆಳೆದಿದ್ದಾರೆ. ಸತತ ಎಂಟು ವರ್ಷಗಳ ಕಾಲ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಡಾ. ಜಿ ಪರಮೇಶ್ವರ್ ಅವರದ್ದು. ಕಳೆದ ವಾರ ಸಿದ್ಧಾರ್ಥ ಕಾಲೇಜು, ಪರಮೇಶ್ವರ್ ನಿವಾಸ ಹಾಗು ಆಪ್ತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

Image result for ಡಾ. ಜಿ. ಪರಮೇಶ್ವರ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು
ಈಗಾಗಲೇ ಒಮ್ಮೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆಯನ್ನು ನಡೆಸಿದ್ದಾರೆ. ಆದಾಯ ತೆರಿಗೆ ಇಲಾಖೆ ದಾಳಿ ನಡೆದಿರುವ ಸಂದರ್ಭದಲ್ಲಿ ಈ ಚರ್ಚೆ ಆರಂಭವಾಗಿರೋದು ವಿಶೇಷ. ಐಟಿ ಅಧಿಕಾರಿಗಳ ದಾಳಿಗೂ ಮುನ್ನ ಬಿಜೆಪಿ ಸೇರ್ಪಡೆ ಆಗಿದ್ದರೆ, ಐಟಿ ದಾಳಿಯಿಂದ ಪಾರಾಗಲು ಈ ರೀತಿ ರಾಜಕೀಯ ನಡೆ ಅನುಸರಿಸಿದ್ದಾರೆ ಎಂದು ಹೇಳಬಹುದಿತ್ತು. ಆದರೆ‌ ಈಗಾಗಲೇ ಐಟಿ ದಾಳಿ ನಡೆದಿದ್ದು, ಇನ್ನೇನಿದ್ದರು ತನಿಖೆ ಮಾತ್ರ ಬಾಕಿ ಇದೆ. ಈಗಿರುವಾಗ ಬಿಜೆಪಿ ಸೇರ್ಪಡೆಯಿಂದ ಆಗುವ ಲಾಭ ಏನು ಎನ್ನುವ ಯಕ್ಷ ಪ್ರಶ್ನೆ ಎಲ್ಲರನ್ನೂ ಕಾಡಲು ಶುರುವಾಗಿದೆ. ಈ ಪ್ರಶ್ನೆಗೆ ಉತ್ತರ ಕಾಂಗ್ರೆಸ್ ಪಕ್ಷದ‌ ಕಚೇರಿಯಲ್ಲಿ ಸಿಗುತ್ತಿದೆ.

Image result for siddharth college in parameshwar
ಪರಮೇಶ್ವರ್ ಮೇಲೆ‌ ಐಟಿ ದಾಳಿ ನಡೆದ ಬಳಿಕ ಡಾ ಜೀ ಪರಮೇಶ್ವರ್ ಅವರಿಗೆ ಬಿಜೆಪಿ ನಾಯಕರಿಂದ ಆಫರ್ ಒಂದು ಎದುರಾಗಿದ್ದು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರೆ ಜಾರಿ‌ ನಿರ್ದೇಶನಾಲಯ ಕೈಗೆ ಸಿಲುಕಿಕೊಳ್ಳುವುದು ತಪ್ಪಲಿದೆ ಪಕ್ಷ ಪಕ್ಷ ಎಂದುಕೊಂಡು ಡಿಕೆ ಶಿವಕುಮಾರ್ ಅವರು‌ ಕಷ್ಟ ಅನುಭವಿಸುತ್ತಿದ್ದಾರೆ. ನೀವು ಕೂಡ ಅದೇ ರೀತಿ ಇಕ್ಕಟ್ಟಿಗೆ ಸಿಲುಕುವ ಬದಲು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ರಾಜಕೀಯದ ದಿಕ್ಕು ಬದಲಿಸಿ ಎಂಬ ಆಫರ್ ಗಳು ಸಲಹೆಗಳ ರೂಪದಲ್ಲಿ ಬಂದಿವೆ ಎನ್ನಲಾಗ್ತಿದೆ. ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳಲಾಗದ ಪರಮೇಶ್ವರ್, ಬಿಜೆಪಿ ಸೇರುವ ಮನಸ್ಸು ಮಾಡಿದ್ದಾರೆ ಎನ್ನುವ ಸಂದೇಶ ರವಾನಿಸಿದ್ದಾರೆ.

Image result for ಡಿಕೆ ಶಿವಕುಮಾರ್ jail
ತನ್ನ ಪರಮಾಪ್ತ ಕಾಂಗ್ರೆಸ್ ನಾಯಕನಾದ ಕೆ.ಸಿ ರಾಮಮೂರ್ತಿ ಕಾಂಗ್ರೆಸ್ ತೊರೆದು ಬಿಜೆಪಿ‌ ಸೇರಲು ಅಣಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ರಾಜ್ಯಸಭಾ ಸ್ಥಾನಕ್ಕೆ‌ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜ್ಯಸಭಾಧ್ಯಕ್ಷರೂ ಆದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಭೇಟಿಯಾಗಿ ನೇರವಾಗಿ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. ಇದಕ್ಕೂ ಮೊದಲೇ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸಿರುವ ಕೆ. ಸಿ ರಾಮಮೂರ್ತಿ ಅವರು, ಕಮಲ ಪಕ್ಷಕ್ಕೆ ಸೇರ್ಪಡೆ ಆಗೋದು ಬಹುತೇಕ ಖಚಿತವಾಗಿದೆ. ನಿವೃತ್ತ ಐಪಿಎಸ್ ಅಧಿಕಾರಿ ಆಗಿರುವ ಕೆ.ಸಿ ರಾಮಮೂರ್ತಿ ಡಾ. ಜಿ ಪರಮೇಶ್ವರ್ ಅವರ ಪರಮಾಪ್ತರಲ್ಲಿ ಒಬ್ಬರು.

Image result for ವೆಂಕಯ್ಯನಾಯ್ಡು
ಕಳೆದ ಬಾರಿ ರಾಜ್ಯಸಭೆಗೆ‌ ಆಯ್ಕೆ ಮಾಡುವಾಗ ಪರಮೇಶ್ವರ್ ಪಟ್ಟು ಹಿಡಿದು ಆಯ್ಕೆಯಾಗುವಂತೆ ನೋಡಿಕೊಂಡರು. ಕೆ.ಸಿ ರಾಮಮೂರ್ತಿ ಕೂಡ ಅಂದಿನ ಜೆಡಿಎಸ್ ಬಂಡಾಯ ಶಾಸಕರ ಯೋಗಕ್ಷೇಮ ನೋಡಿಕೊಂಡು ರಾಜ್ಯಸಭೆಗೆ ಆಯ್ಕೆಯಾಗಿದ್ದರು ಎನ್ನುವ ಮಾತುಗಳೂ ಕೇಳಿ ಬಂದಿದ್ವು. ಇದೀಗ ಅವಧಿ ಪೂರ್ವದಲ್ಲೇ ರಾಜೀನಾಮೆ ಕೊಟ್ಟಿರೋದು ಐಟಿ ಭಯಕ್ಕೆ ಎನ್ನುವ ಅನುಮಾನ ಮೂಡುವಂತಾಗಿದೆ. ರಾಮಸ್ವಾಮಿ ನಂತರ ಪರಮೇಶ್ವರ್ ಅವರು ಕೂಡ ತಮ್ಮ ರಾಜಕೀಯ ಹಾದಿ ಬದಲಿಸುತ್ತಾರೆ ಎಂಬ ಚರ್ಚೆಗೆ ಜೋರಾಗುತ್ತಿದೆ.


Comments