ಇದೀಗ ಬಂದ ಸುದ್ದಿ !! ಬಲಿಷ್ಠ ಬಿಜೆಪಿ ಮುಖಂಡೆ ರಾಜೀನಾಮೆ , ಹೆಬ್ಬಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ




ಭವ್ಯಾ ಶೆಟ್ಟಿತಮ್ಮ ಸ್ಥಾನಕ್ಕೆ ಜ. 7ರಂದು ರಾಜೀನಾಮೆ ಸಲ್ಲಿಸಿದರು. ಕಾರವಾರದಲ್ಲಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು.

ಜ. 6ರಂದು ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಂದೆರಡು ದಿನದಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿದಂತೆ ಮಂಗಳವಾರವೇ ರಾಜೀನಾಮೆ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸದಸ್ಯರಾದ ರಾಧಾ ಹೆಗಡೆ, ಮಾಲಾ ಚಂದಾವರ, ಕವಿತಾ ತಿನೇಕರ, ಮಂಗಲಾ ನಾಯ್ಕ ಉಪಸ್ಥಿತರಿದ್ದರು.

4 ವರ್ಷಗಳ ಹಿಂದೆ ನಡೆದ ತಾಪಂ ಚುನಾವಣೆಯಲ್ಲಿ ಬಿಜೆಪಿಯ 6 ಹಾಗೂ ಕಾಂಗ್ರೆಸ್‌ನ 5 ಸದಸ್ಯರು ಆಯ್ಕೆಗೊಂಡಿದ್ದರು. ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯಿಂದ ಆಯ್ಕೆಗೊಂಡಿದ್ದ ಭವ್ಯಾ ಶೆಟ್ಟಿ, ಕಾಂಗ್ರೆಸ್‌ನ 5 ಸದಸ್ಯರ ಬೆಂಬಲ ಪಡೆದು ಅಧ್ಯಕ್ಷರಾಗಿದ್ದರು.

ನಂತರ ಅಧ್ಯಕ್ಷರು ಹಾಗೂ ಕೆಲ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಮತ್ತು ಸಮನ್ವಯದ ಕೊರತೆ ಬಹಿರಂಗವಾಗಿಯೇ ಚರ್ಚಿತಗೊಳ್ಳುತ್ತಿತ್ತು. ಭವ್ಯಾ ಶೆಟ್ಟಿಅಧ್ಯಕ್ಷರಾದ ನಂತರ ಬಿಜೆಪಿ ಜತೆ ಗುರುತಿಸಿಕೊಳ್ಳದೇ, ಕಾಂಗ್ರೆಸ್‌ ಶಾಸಕರಾಗಿದ್ದ ಹೆಬ್ಬಾರರ ಆಪ್ತ ವಲಯದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.

 ಸ್ಥಳೀಯ ಬಿಜೆಪಿ ಪ್ರಮುಖರು ಭವ್ಯಾ ಶೆಟ್ಟಿವಿರುದ್ಧ ಜಿಲ್ಲೆ ಹಾಗೂ ರಾಜ್ಯದ ನಾಯಕರಿಗೆ ದೂರು ನೀಡಿದ್ದರೂ ಯಾವ ಪ್ರಯೋಜನವೂ ಆಗಿರಲಿಲ್ಲ. ಇದೀಗ ಹೆಬ್ಬಾರ ಬಿಜೆಪಿಗೆ ಬಂದಿದ್ದು, ಅವರ ಬೆಂಬಲಿಗರಾಗಿ ತಾಪಂನ ಎಲ್ಲ 5 ಕಾಂಗ್ರೆಸ್‌ ಸದಸ್ಯರು ಬಿಜೆಪಿಯನ್ನು ಸೇರಿಕೊಂಡಿದ್ದಾರೆ.

ಬಿಜೆಪಿ ಮುಖಂಡರಿಂದ ಅವರ ರಾಜೀನಾಮೆಗೆ ಒತ್ತಾಯ ಕೇಳಿಬಂದಿದ್ದು, ಬಿಜೆಪಿ ಮುಖಂಡರ ಒತ್ತಾಯಕ್ಕೆ ಮಣಿದು ಶಾಸಕ ಶಿವರಾಮ ಹೆಬ್ಬಾರರು ರಾಜೀನಾಮೆ ಸಲ್ಲಿಸಿ, ಬೇರೆಯವರಿಗೆ ಅವಕಾಶ ನೀಡುವಂತೆ ಭವ್ಯಾ ಅವರಿಗೆ ಸೂಚನೆ ನೀಡಿದ್ದರು. ಶಾಸಕರ ಮಾತನ್ನು ಮನ್ನಿಸಿ ತಮ್ಮ ಸ್ಥಾನವನ್ನು ಇದೀಗ ತೆರವುಗೊಳಿಸಿದ್ದಾರೆ.

Comments