ಮಾಜಿ ಸಚಿವ ಡಿಕೆಶಿ ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ !! ಹೈಕಮಾಂಡ್ ಗ್ರೀನ್ ಸಿಗ್ನಲ್


ಮಾಜಿ ಸಚಿವ ಡಿ.ಕೆ ಶಿವಕುಮಾರ್​​​ಗೆ ‘ಕೆಪಿಸಿಸಿ ಅಧ್ಯಕ್ಷ‘ ಪಟ್ಟ: ಮಾತು ಕೊಟ್ಟು ಸಂಕಷ್ಟಕ್ಕೆ ಸಿಲುಕಿತೇ ಹೈಕಮಾಂಡ್​​?
ನಾನೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎನ್ನುತ್ತಿರುವವರ ಪೈಕಿ ಬಹುತೇಕ ಸಿದ್ದರಾಮಯ್ಯ ಆಪ್ತರೇ ಇದ್ದಾರೆ. ಮಾಜಿ ಸಚಿವ ಸತೀಶ್​ ಜಾರಕಿಹೊಳಿ, ಮಾಜಿ ಶಾಸಕ ಕೆ.ಎನ್​​ ರಾಜಣ್ಣ ಕೂಡ ಸಿದ್ದರಾಮಯ್ಯ ಆಪ್ತರಾಗಿದ್ದಾರೆ ಎಂಬುದು ಗೊತ್ತಿರುವ ಸಂಗತಿ. ಇನ್ನು, ಎಂ.ಬಿ ಪಾಟೀಲ್​​ ಮತ್ತು ಮಾಜಿ ಸಚಿವ ಕೃಷ್ಣಬೈರೇಗೌಡ ಕೂಡ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
SHARE THIS:
ಮಾಜಿ ಸಚಿವ ಡಿ.ಕೆ ಶಿವಕುಮಾರ್​​​ಗೆ ‘ಕೆಪಿಸಿಸಿ ಅಧ್ಯಕ್ಷ‘ ಪಟ್ಟ: ಮಾತು ಕೊಟ್ಟು ಸಂಕಷ್ಟಕ್ಕೆ ಸಿಲುಕಿತೇ ಹೈಕಮಾಂಡ್​​?
NEWS18-KANNADA
LAST UPDATED:JANUARY 8, 2020, 8:54 AM IST
ಬೆಂಗಳೂರು(ಜ.08): ಮಾಜಿ ಸಚಿವ ಡಿ.ಕೆ ಶಿವಕುಮಾರ್​​ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುತ್ತೇವೆ ಎಂದು ಮಾತು ಕೊಟ್ಟು ಕಾಂಗ್ರೆಸ್​​ ಹೈಕಮಾಂಡ್​​ ಪೇಚಿಗೆ ಸಿಲುಕಿದೆ ಎಂಬ ಮಾತುಗಳು ರಾಜಕೀಯದಲ್ಲಿ ಕೇಳಿ ಬರುತ್ತಿವೆ. ಇತ್ತೀಚೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್​​ ಜೈಲಿನಿಂದ ಬಿಡುಗಡೆಯಾಗುವ ವೇಳೆ ಹೈಕಮಾಂಡ್​​ ಸೋನಿಯಾ ಗಾಂಧಿ ಅವರನ್ನು ಡಿ.ಕೆ ಶಿವಕುಮಾರ್​​ ಭೇಟಿಯಾಗಿದ್ದರು. ಆಗ ಡಿ.ಕೆ ಶಿವಕುಮಾರ್​​ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡುವುದಾಗಿ ಹೈಕಮಾಂಡ್​​ ಭರವಸೆ ನೀಡಿದ್ದರು. ಆದರೀಗ ಡಿ.ಕೆ ಶಿವಕುಮಾರ್​​ಗೆ ಕರ್ನಾಟಕ ಪ್ರಾದೇಶಿಕ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಎರಡು ದಿನಗಳ ಹಿಂದೆ ಡಿ.ಕೆ ಶಿವಕುಮಾರ್​​ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು ಎನ್ನಲಾಗುತ್ತಿದೆ. 

Comments