ಬ್ರೇಕಿಂಗ್ ನ್ಯೂಸ್ : ಗೆಳೆಯರ ಸಾವಿಗೆ ಪ್ರತೀಕಾರ ತೀರಿಸಿಕೊಂಡ ಭಾರತಮಾತೆ ಕಾಯುವ ಹುಲಿಗಳು!

ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಲಷ್ಕರ್‌ ಇ ತೊಯ್ಬಾದ ಟಾಪ್‌ ಕಮಾಂಡರ್‌ ಹೈದರ್‌ನನ್ನು ಎನ್‌ಕೌಂಟರ್‌ ಮಾಡಲಾಗಿದೆ ಎಂದು ಕಾಶ್ಮೀರದ ಐಜಿ ವಿಜಯ್‌ ಕುಮಾರ್‌ ಹೇಳಿದ್ದಾರೆ.

ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿ

ಶ್ರೀ ಟಿ.ಎಚ್. ಭಟ್ಟರ ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ಕೂಡಲೇ ನಿಮ್ಮ ಸಮಸ್ಯೆಗಳಿಗೆ ಸಂಪರ್ಕಿಸಿ ಶ್ರೀ ಟಿ.ಎಚ್.ಭಟ್ಟರ 944 888 6845

ಎನ್‌ಕೌಂಡರ್‌ ಬಗ್ಗೆ ಮಾಹಿತಿ ನೀಡಿದ ವಿಜಯ್‌ ಕುಮಾರ್‌, ಪಾಕಿಸ್ತಾನದ ಲಷ್ಕರ್‌ ಇ ತೊಯ್ಬಾದ ಟಾಪ್‌ ಕಮಾಂಡರ್‌ ಹೈದರ್‌ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದರು. ಎನ್‌ಕೌಂಟರ್‌ ಬಗ್ಗೆ ಬೆಳಗ್ಗೆ ಮಾಹಿತಿ ನೀಡಿದ್ದ ಅಧಿಕಾರಿಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದರು. ಉಗ್ರರ ಗುರುತು ಪತ್ತೆ ಹಚ್ಚಿದ ನಂತರ, ಅದರಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್‌ ಇ ತೊಯ್ಬಾದ ಟಾಪ್‌ ಕಮಾಂಡರ್‌ ಹೈದರ್‌ ಕೂಡ ಎನ್‌ಕೌಂಟರ್‌ ಆಗಿದ್ದಾನೆ ಎಂದು ತಿಳಿದುಬಂದಿದೆ. ಇತನನ್ನು ಹೈದರ್‌ ಇ ಕ್ರಾರ್‌ ಎಂದು ಗುರುತಿಸಲಾಗಿದ್ದು, ಲಷ್ಕರ್‌ ಎ ತೊಯ್ಬಾದ ಬಂಡಿಪೊರದ ಡೆಪ್ಯುಟಿ ಕಮಾಂಡರ್‌ ಆಗಿದ್ದ ಎಂಬ ಮಾಹಿತಿ ಇದೆ.

ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿ

ಶ್ರೀ ಟಿ.ಎಚ್. ಭಟ್ಟರ ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ಕೂಡಲೇ ನಿಮ್ಮ ಸಮಸ್ಯೆಗಳಿಗೆ ಸಂಪರ್ಕಿಸಿ ಶ್ರೀ ಟಿ.ಎಚ್.ಭಟ್ಟರ 944 888 6845

ಹಂದ್ವಾರಾದ ಚಾಂಜ್‌ಮುಲ್ಲಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದರೆ, ಇಬ್ಬರು ಸೇನಾಧಿಕಾರಿಗಳು ಸೇರಿ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಚಾಂಜ್‌ಮುಲ್ಲಾ ಪ್ರದೇಶದಲ್ಲಿ ನಾಗರಿಕರನ್ನು ಉಗ್ರರು ಒತ್ತೆಯಾಳಾಗಿಟ್ಟುಕೊಂಡಿದ್ದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಭದ್ರತಾ ಸಿಬ್ಬಂದಿ ನಾಗರಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ದಾಳಿಯಲ್ಲಿ. ಕೊಲೊನೆಲ್‌ ಕೊಲೋನೆಲ್‌ ಅಶುತೋಷ್‌ ಶರ್ಮಾ, ಮೇಜರ್‌ ಅನೂಜ್‌ ಸೂದ್‌, ಲ್ಯಾನ್ಸ್‌ ನಾಯ್ಕ್‌ ರಾಜೇಶ್‌, ಲ್ಯಾನ್ಸ್‌ ನಾಯ್ಕ್‌ ದಿನೇಶ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಶಕೀಲ್‌ ಕ್ವಾಜಿ ಹುತಾತ್ಮರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಸತತವಾಗಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ. ಪಾಕಿಸ್ತಾನದಿಂದ ಹಲವು ಉಗ್ರರು ದೇಶದೊಳಗೆ ನುಸುಳಲು ಗಡಿಯಲ್ಲಿ ಹೊಂಚು ಹಾಕಿದ್ದಾರೆ.

Comments