ಬಿ ವೈ ವಿಜಯೆಂದ್ರ ಅವರಿಗೆ ಒಳಿದ ಅದೃಷ್ಟ !! ಕರ್ನಾಟಕ ಬಿಜೆಪಿಯ ಉತ್ತರಾಧಿಕಾರಿಯನ್ನು ಘೋಷಿಸಿದ ಯಡಿಯೂರಪ್ಪ


ತಮ್ಮ ಅಧಿಕಾರಾವಧಿಯಲ್ಲೇ ಪುತ್ರನನ್ನು ಪಕ್ಷದಲ್ಲಿ ಉತ್ತರಾಧಿಕಾರಿ ಮಾಡಬೇಕೆಂದು ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದಕ್ಕಾಗಿ ಭಾರೀ ಲಾಬಿಯನ್ನೇ ನಡೆಸಿದ್ದಾರೆ. ಹಾಲಿ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಿಸಲು ಬಿಎಸ್‍ವೈ ತಮ್ಮ ಆಪ್ತರ ಮೂಲಕ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.

ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿ

ಶ್ರೀ ಟಿ.ಎಚ್. ಭಟ್ಟರ ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ಕೂಡಲೇ ನಿಮ್ಮ ಸಮಸ್ಯೆಗಳಿಗೆ ಸಂಪರ್ಕಿಸಿ ಶ್ರೀ ಟಿ.ಎಚ್.ಭಟ್ಟರ 944 888 6845


ಈ ಸಂಬಂಧ ಗುರುವಾರ ಪಕ್ಷದ ಪ್ರಮುಖರು ಹಾಗೂ ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ರವಿಕುಮಾರ್ ಮತ್ತಿತರರ ಜೊತೆ ಸಭೆ ನಡೆಸಿ ಪುತ್ರನನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪರಿಗಣಿಸಲು ವರಿಷ್ಠರ ಬಳಿ ಮನವಿ ಮಾಡಬೇಕೆಂದು ಸೂಚನೆ ಕೊಟ್ಟಿದ್ದಾರೆ.

ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿ

ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ ,ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ ಕೂಡಲೇ ಟಿ.ಎಚ್.ಭಟ್ ಗುರೂಜಿಯವರನ್ನು ಸಂಪರ್ಕಿಸಿ 944 888 6845

ಈಗಾಗಲೇ ಒಬ್ಬ ಪುತ್ರ ಬಿ.ವೈ.ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಮತ್ತೊಬ್ಬ ಪುತ್ರ ವಿಜಯೇಂದ್ರನನ್ನು ಪ್ರಧಾನ ಕಾರ್ಯದರ್ಶಿ ಮಾಡಿ 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ವೇದಿಕೆ ಸಿದ್ದಪಡಿಸಲು ಸಜ್ಜಾಗಿದ್ದಾರೆ.  ಈ ಹಿಂದೆಯೇ ವಿಜಯೇಂದ್ರ ಅವರನ್ನು ಪ್ರಧಾನ ಕಾರ್ಯದರ್ಶಿ ಮಾಡಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸಂಪುಟಕ್ಕೆ ಸೇರ್ಪಡೆಯಾದರು. ಬಿಜೆಪಿಯ ನಿಯಮಾವಳಿ ಪ್ರಕಾರ ಓರ್ವ ವ್ಯಕ್ತಿಗೆ ಒಂದೇ ಹುದ್ದೆ ಎಂಬಂತೆ ಸಿ.ಟಿ.ರವಿಯಿಂದ ತೆರವಾದ ಸ್ಥಾನಕ್ಕೆ ಮಹೇಶ್ ತೆಂಗಿನಕಾಯಿ ಅವರನ್ನು ನೇಮಿಸಲಾಯಿತು.

ಇದೀಗ ಮತ್ತೊಂದು ಹೆಚ್ಚುವರಿ ಹುದ್ದೆ ಸೃಷ್ಟಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿರುವ ಸಿಎಂ ಯಡಿಯೂರಪ್ಪ ವಿಜಯೇಂದ್ರನನ್ನು ಪ್ರಧಾನಿ ಕಾರ್ಯದರ್ಶಿ ಹುದ್ದೆಗೆ ನೇಮಿಸಲು ಸರ್ವಪ್ರಯತ್ನ ನಡೆಸಿದ್ದಾರೆ. ಈ ಹಿಂದೆ ಇದೇ ಮಾತುಗಳು ಕೇಳಿಬಂದಿದ್ದವಾದರೂ ಕುಟುಂಬ ರಾಜಕಾರಣವನ್ನು ಪ್ರಬಲವಾಗಿ ವಿರೋಧಿಸುವ ಬಿಜೆಪಿ ನಾಯಕರು ವಿಜಯೇಂದ್ರಗೆ ಪಟ್ಟ ಕಟ್ಟಲು ಸುತರಾಂ ಒಪ್ಪಿರಲಿಲ್ಲ.

ಕಾಂಗ್ರೆಸ್‍ನ ಕುಟುಂಬ ರಾಜಕಾರಣವನ್ನು ವಿರೋಧಿಸುವ ನಾವು ನಮ್ಮ ಪುತ್ರರಿಗೆ ಸ್ಥಾನಮಾನ ಕಲ್ಪಿಸಿದರೆ ಬೇರೆ ಪಕ್ಷಕ್ಕೂ ನಮಗೂ ಏನು ವ್ಯತ್ಯಾಸವಿರುತ್ತದೆ ಎಂದು ಯಡಿಯೂರಪ್ಪನವರ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರು. ಹೀಗಾಗಿ ಇದು ನೆನೆಗುದಿಗೆ ಬಿದ್ದಿತ್ತು. ಇದೀಗ ಬಿಎಸ್‍ವೈ ಪುತ್ರನಿಗೆ ಸ್ಥಾನ ಕಲ್ಪಿಸಲು ಯಡಿಯೂರಪ್ಪ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ.

# ಬಹುತೇಕರಿಗೆ ಅಸಮಾಧಾನ:
ಪಕ್ಷದ ವಲಯದಲ್ಲಿ ವಿಜಯೇಂದ್ರ ಅವರ ಬಗ್ಗೆ ಹಲವು ಮುಖಂಡರಿಗೆ ಅಸಮಾಧಾನವಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ವೇಳೆ ಸಿಎಂ ಯಡಿಯೂರಪ್ಪನವರಿಗೆ ಕುಟುಂಬದ ಸದಸ್ಯರನ್ನು ದೂರ ಇಡುವಂತೆ ಪಕ್ಷದ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿತ್ತು.  ಪ್ರಾರಂಭದಲ್ಲಿ ವಿಜಯೇಂದ್ರ ಹೈಕಮಾಂಡ್ ಆದೇಶವನ್ನು ಪಾಲನೆ ಮಾಡಿದರಾದರೂ ಈಗಲೂ ಅನೇಕ ಶಾಸಕರು ಮತ್ತು ಸಚಿವರಿಗೆ ಅವರ ನಡುವಳಿಕೆ ಕುರಿತಂತೆ ಅಸಮಾಧಾನವಿದೆ.

ಅಧಿಕಾರಿಗಳ ವರ್ಗಾವಣೆ, ಶಾಸಕರ ಅನುದಾನ ಬಿಡುಗಡೆ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು.
ಈ ಬಗ್ಗೆ ಹೈಕಮಾಂಡ್ ನಾಯಕರು ಕೂಡ ಅಸಮಾಧಾನಗೊಂಡು ಪುತ್ರನನ್ನು ದೂರ ಇಡಬೇಕೆಂದು ದೆಹಲಿ ನಾಯಕರೇ ಸೂಚನೆ ಕೊಟ್ಟಿದ್ದರು. ಈಗಲೂ ನೆಪ ಎಂಬಂತೆ ವಿಜಯೇಂದ್ರ ಯಡಿಯೂರಪ್ಪನವರ ಮನೆಯಿಂದ ದೂರ ಉಳಿದಿದ್ದರೂ ಪ್ರಮುಖ ತೀರ್ಮಾನಗಳಲ್ಲಿ ಅವರ ಹಸ್ತಕ್ಷೇಪ ಇದ್ದೇ ಇರುತ್ತದೆ ಎಂಬುದು ಜಗಜ್ಜಾಹೀರವಾಗಿದೆ.

Comments