ಜೆಡಿಎಸ್ ಭದ್ರಕೋಟೆಯಲ್ಲಿ ಮಕಾಡೆ ಮಲಗಿದ ಜೆಡಿಎಸ್, ಕ್ಲೀನ್ ಸ್ವೀಪ್ ನೊಂದಿಗೆ ಭರ್ಜರಿ ಜಯ ಸಾಧಿಸಿದ ಕಾಂಗ್ರೆಸ್

 


ತಾಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಹೊಸಹಳ್ಳಿ ಕ್ಷೇತ್ರದ ಪುಟ್ಟಸ್ವಾಮಿ ಮಂಗಳವಾರ ಚುನಾಯಿತರಾದರು.




ಆತಂರಿಕ ಒಪ್ಪಂದಂತೆ ಅಧ್ಯಕ್ಷ ಸುಂದರೇಶ್‌ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಪುಟ್ಟಸ್ವಾಮಿ 13 ಮತ, ಜೆಡಿಎಸ್‌ನ ಸೋಮಶೇಖರ್‌ 12 ಮತ ವಿರುದ್ಧ 1 ಮತದ ಅಂತರದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು.



 

ಒಟ್ಟು 25 ಸದಸ್ಯ ಬಲದ ತಾಲೂಕು ಪಂಚಾಯತಿಯಲ್ಲಿ ಕಾಂಗ್ರೆಸ್‌ 14 ಮತ್ತು ಜೆಡಿಎಸ್‌ನ 11 ಸದಸ್ಯರು ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಹೊಸಹಳ್ಳಿ ಕ್ಷೇತ್ರದ ಪುಟ್ಟಸ್ವಾಮಿ ಮತ್ತು ಜೆಡಿಎಸ್‌ನಿಂದ ಕಲ್ಕುಣಿ ಕ್ಷೇತ್ರದ ಸೋಮಶೇಖರ್‌ ಅ. ನಟೇಶ್‌ ನಾಮಪತ್ರ ಸಲ್ಲಿಸಿ ಅಂತಿಮವಾಗಿ ಕಣದಲ್ಲಿದ್ದರು.



ತಾಪಂ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ತಂತ್ರಗಾರಿಕೆ ರೂಪಿಸಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ದೊಡ್ಡಯ್ಯ, ಶಂಕರ್‌ ಜೆಡಿಎಸ್‌ನಿಂದ ಕಣದಲ್ಲಿದ್ದ ಸೋಮಶೇಖರ್‌ಗೆ ಕೈ ಎತ್ತಿಸುವ ಮೂಲಕ ಬೆಂಬಲ ಪಡೆದಿದ್ದರು. ಜೆಡಿಎಸ್‌ ತಂತ್ರ ಪ್ರತಿತಂತ್ರ ಹೆಣೆದಿದ್ದ ಕಾಂಗ್ರೆಸ್‌ನ ತಳಗವಾದಿ ಕ್ಷೇತ್ರದ ಜೆಡಿಎಸ್‌ ಸದಸ್ಯೆ ಶಿಲ್ಪಾ ಅವರನ್ನು ಸೆಳೆದು ತಾಪಂ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶ್ವಸಿಯಾಯಿತು. ಜೆಡಿಎಸ್‌ ಕಾಂಗ್ರೆಸ್‌ನ ಇಬ್ಬರು ಸದಸ್ಯರನ್ನು ಸೆಳೆದರೂ, ಜೆಡಿಎಸ್‌ನ ಒಬ್ಬ ಸದಸ್ಯೆ ಕಾಂಗ್ರೆಸ್‌ ಬೆಂಬಲಿಸಿದ ಹಿನ್ನಲೆಯಲ್ಲಿ ಜೆಡಿಎಸ್‌ ಅಧಿಕಾರ ಹಿಡಿಯುವಲ್ಲಿ ಮುಗ್ಗರಿಸಿ ಮುಖಭಂಗ ಅನುಭವಿಸಿದೆ.


ಉಪವಿಭಾಗಾಧಿಕಾರಿ ಸೂರಜ್‌ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ನೂತನ ಅಧ್ಯಕ್ಷರಾಗಿ ಪುಟ್ಟಸ್ವಾಮಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.


ಜಿಪಂ ಸದಸ್ಯನ ವಿರುದ್ಧ ಆಕ್ರೋಶ


ತೂತನ ಅಧ್ಯಕ್ಷರಾಗಿ ಆಯ್ಕೆಯಾದ ಪುಟ್ಟಸ್ವಾಮಿ ಪಕ್ಷದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ತಳಗವಾದಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಹನುಮಂತು ಅವರನ್ನು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಕರೆತಂದು ಜಿಪಂ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ನೀಡಿ ಚುನಾವಣೆಯಲ್ಲಿ ಗೆಲ್ಲಿಸಿ , ಜಿಪಂ ವಿಪಕ್ಷ ನಾಯಕನಾಗಿ ಮಾಡಿದ್ದರು, ಆದರೆ ಅಧಿಕಾರ ಅನುಭವಿಸಿ ಕಾಂಗ್ರೆಸ್‌ಗೆ ದ್ರೋಹ ಮಾಡಿದ ಹನುಮಂತು ತಾಪಂ ಅಧ್ಯಕ್ಷ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಆಯ್ಕೆಯಾಗಿದ್ದ ದೊಡ್ಡಯ್ಯ ಮತ್ತು ಶಂಕರ್‌ ಅವರನ್ನು ಜೆಡಿಎಸ್‌ ಪಕ್ಷಕ್ಕೆ ಕರೆದು ಹೋಗಿದ್ದಾರೆ. ಇಂತಹ ಪಕ್ಷ ದ್ರೋಹಿಗಳಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕಪಾಠ ಕಲಿಸಿದ್ದಾರೆ. ಕಾಂಗ್ರೆಸ… ಪಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ನೀಡಿದೆ ಎಂದರು.



Comments