ಗುಜರಾತಿನಲ್ಲಿ ಗಿನ್ನಿಸ್ ದಾಖಲೆ ಮಾಡಿದ ಕಾಂಗ್ರೆಸ್ !! ಬಿಜೆಪಿ ವಿರುದ್ಧ 33 ಸ್ಥಾನಗಳ ಪೈಕಿ 32 ಸ್ಥಾನ ಗೆದ್ದ ಕಾಂಗ್ರೆಸ್
ಗುಜರಾತಿನಲ್ಲಿ ಕಳೆದ ಸೋಮವಾರ ನಡೆದ ಜಿಲ್ಲಾ ಪಂಚಾಯತ್ಉ ಪಚುನಾವಣೆಯಲ್ಲಿ ಕಾಂಗ್ರೆಸ್ 30 ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಸ್ಥಾನಗಳ ಪೈಕಿ 26 ಸ್ಥಾನಗಳನ್ನು ಗೆದ್ದಿದೆ ಮತ್ತು ಇತರ ಮೂರು ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದೆ. ಪ್ರತಿಪಕ್ಷ ಬಿಜೆಪಿ ಕೇವಲ ಮೂರು ಸ್ಥಾನಗಳನ್ನು ಗೆದ್ದರೆ, ಇನ್ನೊಂದನ್ನು ಸ್ವತಂತ್ರ ಅಭ್ಯರ್ಥಿ ಗೆದ್ದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ..
ರಾಜ್ಯ ಚುನಾವಣಾ ಆಯೋಗ ಶುಕ್ರವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, “ಒಟ್ಟು 33 ಸ್ಥಾನಗಳಲ್ಲಿ, ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದಿದ್ದಾರೆ. 30 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅದರಲ್ಲಿ ಕಾಂಗ್ರೆಸ್ 26 ಸ್ಥಾನಗಳು, ಬಿಜೆಪಿ ಮೂರು ಸ್ಥಾನಗಳು ಮತ್ತು ಒಂದು ಸ್ಥಾನ ಸ್ವತಂತ್ರ ಅಭ್ಯರ್ಥಿ ಗೆದ್ದುಕೊಂಡಿದ್ದಾರೆ” ಎಂದಿದ್ದಾರೆ. ಚುನಾವಣೆ ನಡೆದ 30 ಸ್ಥಾನಗಳ ಪೈಕಿ ಮೂರು ಸ್ಥಾನಗಳು ಜಿಲ್ಲಾ ಪಂಚಾಯತ್ ಸ್ಥಾನಗಳಾಗಿವೆ. ಇದರಲ್ಲಿ ಕಾಂಗ್ರೆಸ್ ಒಂದು ಸ್ಥಾನ, ಬಿಜೆಪಿ ಎರಡು ಸ್ಥಾನಗಳಲ್ಲಿ ಜಯ ಸಾಧಿಸಿವೆ.
ಉಳಿದ 27 ಸ್ಥಾನಗಳು ತಾಲ್ಲೂಕು ಪಂಚಾಯಿತಿಗಳಾಗಿದ್ದು, ಇದರಲ್ಲಿ ಕಾಂಗ್ರೇಸ್ 25, ಬಿಜೆಪಿ 1 ಮತ್ತು 1 ಸ್ವತಂತ್ರ ಅಭ್ಯರ್ಥಿ ಎಂದು ಚುನಾವಣಾ ಆಯೋಗ ತಿಳಿಸಿದೆ. ವಿಜಯದ ಅವರು 33 ಸ್ಥಾನಗಳ ಪೈಕಿ 29 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದಕ್ಕಾಗಿ ಗುಜರಾತ್ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. “ಈ ವಿಜಯವು ಮುಂಬರುವ ಜಿಲ್ಲೆ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಿಗೆ ಪೂರ್ವಸೂಚಕವಾಗಿದೆ” ಎಂದು ಅವರು ಹೇಳಿದ್ದಾರೆ.
ಸಮಾಜದ ಉತ್ತಮ ಸುದ್ದಿಗಳನ್ನು ನಾವು ನಿಮ್ಮ ಮುಂದಿಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಪ್ರೋತ್ಸಾಹಿಸಿ, ಸ್ವೀಕರಿಸಿ. ನೀವು ಸ್ವೀಕರಿಸಿದಾಗ ನಾವು ಬೆಳೆಯಬಹುದು. ಒಳ್ಳೆಯ ಸುದ್ದಿಗಳಿಗೆ ಸಮಾಜ ತೆರೆದುಕೊಂಡಿದೆ ತಲುಪಿಸುವವರು ನಾವಾಗಬಾರದೇಕೆ? ಇಂತಹ ಅತ್ಯದ್ಭುತ ಗೆಲುವನ್ನು ಪ್ರತಿಯೊಬ್ಬರು ತಪ್ಪದೆ ಶೇರ್ ಮಾಡಿ ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
Comments
Post a Comment