ಸಚಿವ ಜಾರಕಿಹೊಳಿ ಬೆನ್ನಿಗೆ ನಿಂತ ಬಿಜೆಪಿ ಶಾಸಕರು ಮತ್ತು ಸಚಿವರು ಇವರರುಗಳೇ !!

 



ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದ ಸಿಡಿ ಬಿಡುಗಡೆ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಚಿವರು ಹಾಗೂ ಶಾಸಕರು, ರಮೇಶ್ ಜಾರಕಿಹೊಳಿ ಅವರ ಬೆನ್ನಿಗೆ ನಿಂತಿದ್ದಾರೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, "ಪ್ರಕರಣದ ಕುರಿತು ಈಗಲೇ ಏನನ್ನೂ ಹೇಳುವಂತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, ಈ ವಿಚಾರದಲ್ಲಿ ನನ್ನ ಪಾತ್ರ ಏನೂ ಇಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಸಮಗ್ರವಾಗಿ ತನಿಖೆಯಾಗಲಿ. ಸತ್ಯಾಸತ್ಯತೆ ಏನು ಅಂತ ಗೊತ್ತಾಗಲಿ‌. ಆ ಮೇಲೆ ಪ್ರತಿಕ್ರಿಯೆ ನೀಡಬಹುದು‌' ಎಂದು ಹೇಳಿದ್ದಾರೆ.


ಪೂರ್ಣ ಮಾಹಿತಿ ಇಲ್ಲ.. ಟಿವಿಯಲ್ಲಿ ನೀವು ಎಷ್ಟು ನೋಡಿದ್ದೀರೋ ಅಷ್ಟೇ ನಾವು ಕೂಡ ನೋಡಿರುವುದು.ಈ ಬಗ್ಗೆ ಮಾಹಿತಿ ಇಲ್ಲದೇ ಮಾತನಾಡಲು ಸಾಧ್ಯವಿಲ್ಲ. ರಮೇಶ್ ಜಾರಕಿಹೊಳಿ ನಮ್ಮ ಸ್ನೇಹಿತರು. ಮೊದಲು ಪ್ರಕರಣದ ಬಗ್ಗೆ ತಿಳಿದು ಆ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಜೆಸಿ ಮಾಧುಸ್ವಾಮಿ ಹೇಳಿದ್ದಾರೆ.

ರಾಸಲೀಲೆ ಸಿಡಿ ನಕಲಿ: ಬಾಲಚಂದ್ರ
ರಾಸಲೀಲೆ ಸಿಡಿ ನಕಲಿ. ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವ ಅಗತ್ಯವಿಲ್ಲ. ಇದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ. ಸೂಕ್ತ ತನಿಖೆಯಾದರೆ ಎಲ್ಲವು ಗೊತ್ತಾಗಲಿದೆ. ಈ ವಿಡಿಯೋ ಅಪ್‌ಲೋಡ್ ಮಾಡಿರುವುದು ದುಬೈ, ರಷ್ಯಾ, ಸಿಂಗಾಪೂರದಿಂದ ಎಂಬ ಮಾಹಿತಿಗಳಿವೆ. ಹಾಗಾಗಿಈ ಬಗ್ಗೆ ಸಿಬಿಐ ಅಥವಾ ಸಿಐಡಿ ತನಿಖೆಯಾಗಲಿ. ಸಿಡಿ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಚರ್ಚಿಸಿದ್ದೇನೆ. ಈ ನಕಲಿ ಸಿಡಿಯ ಉದ್ದೇಶ, ಹಿಂದಿನ ಉದ್ದೇಶ ಎಲ್ಲವೂ ಚರ್ಚೆಯಾಗಿದೆ. ನಕಲಿ ಸಿಡಿಗಳಿಗೆ ರಾಜೀನಾಮೆ ನೀಡುತ್ತಾ ಹೋದರೆ ಸರ್ಕಾರವೇ ಇರಲ್ಲ. ಈ ಸಿಡಿ ಬಿಡುಗಡೆ ಮಾಡಿರುವವರ ವಿರುದ್ಧ ೧೦೦ ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಅವರು ಹೇಳಿ, ಮುಂದಿನ ಕಾನೂನು ಹೋರಾಟದ ಬಗ್ಗೆಯೂ ವಕೀಲರೊಂದಿಗೆ ಚರ್ಚಿಸಿದ್ದೇವೆ. ಈ ಸಿಡಿಯ ವಿರುದ್ಧ ಪ್ರಭಾವಿ ರಾಜಕಾರಣಿಯೊಬ್ಬರ ಕೈವಾಡವಿದೆ. ಆ ರಾಜಕಾರಣಿ ಬಿಜೆಪಿಗೆ ಸೇರಿದವರಲ್ಲ. ಬೇರೆ ಪಕ್ಷಕ್ಕೆ ಸೇರಿದವರು. ತಮ್ಮ ಸಹೋದರ ರಮೇಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಕುಗ್ಗಿಸಲು ಈ ನಕಲಿಸಿಡಿ ಸೃಷ್ಟಿಯಾಗಿದೆ. ಸಚಿವ ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಲ್ಲ, ಹೋಗುವುದು ಇಲ್ಲ. ಬೆಂಗಳೂರಿನಲ್ಲೇ ಇದ್ದಾರೆ ಎಂದರು.


ನಿಮ್ಮ ಸಹವಾಸವೇ ಬೇಡ ಎಂದು ಕೈ ಮುಗಿದ ಕೆಎಸ್ ಈಶ್ವರಪ್ಪ
ರಾಸಲೀಲೆ ಸಿಡಿ ಪ್ರಕರಣ ಸಂಬಂಧ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಮಾಧ್ಯಮದವರ ಎದುರು ಕೈಮುಗಿಯುತ್ತಾ ನಿಮ್ಮ ಸಹವಾಸವೇ ಬೇಡ ಎಂದು ಹೇಳುತ್ತಾ ಹೋಗಿದ್ದಾರೆ. ರಾಸಲೀಲೆ ಸಿಡಿ ಔಟ್ ಪ್ರಕರಣ ಸಂಬಂಧ ಮಾಧ್ಯಮದವರು ಸಚಿವರ ಹೇಳಿಕೆಯನ್ನು ತೆಗೆದುಕೊಳ್ಳಲು ಮುಂದಾದಾಗ ನಿಮ್ಮ ಸಹವಾಸವೇ ಬೇಡ ಎಂದು ಹೇಳುತ್ತಾ ಮುಂದೆ ಸಾಗಿದರು.


ರಮೇಶ್ ಜಾರಕಿಹೊಳಿ ದೈವ ಭಕ್ತ: ಸಿಪಿ ಯೋಗೇಶ್ವರ್
ಇದೇ ವಿಷಯದ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್, "ಇದೊಂದು ರಾಜಕೀಯ ಪಿತೂರಿಯಾಗಿದೆ, ಸಚಿವ ರಮೇಶ್ ಜಾರಕಿಹೊಳಿ ದೈವ ಭಕ್ತ. ಸಮಾಜಕ್ಕೆ ಅಂಜುವ ವ್ಯಕ್ತಿ. ಈ ರೀತಿಯ ತಪ್ಪು ಮಾಡಿರುತ್ತಾರೆ ಅಂತ ಅನ್ನಿಸುತ್ತಿಲ್ಲ. ಮಂಗಳವಾರದಿಂದಲೂ ನಾನು ಮೈಸೂರಿನಲ್ಲೇ ಇದ್ದೇನೆ. ಏನಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸತ್ಯಾಸತ್ಯತೆ ಪರಿಶೀಲನೆ ಆಗುವವರೆಗೂ ಕಾದು ನೋಡೋಣ ಎಂದು ಹೇಳಿದರು. ಅಂತೆಯೇ, ಈ ಸಿಡಿ ವಿಚಾರದಲ್ಲಿ ನಾನು ರಮೇಶ್ ಜಾರಕಿಹೊಳಿ ಅವರ ಬೆಂಬಲಕ್ಕೆ ಇದ್ದೇನೆ. ಈಗಾಗಲೇ ಅವರ ಜೊತೆ ಮಾತನಾಡಿದ್ದೇನೆ, ಅವರು ನಾನು ತಪ್ಪು ಮಾಡಿಲ್ಲ ಎಂದಿದ್ದಾರೆ. ರಾಜಕಾರಣದಲ್ಲಿ ಯಶಸ್ಸು ಸಿಕ್ಕಾಗ ವಿರೋಧಿಗಳು ಷಡ್ಯಂತ್ರ ರೂಪಿಸುತ್ತಾರೆ. ರಮೇಶ್ ಜಾರಕಿಹೊಳಿ ವಿಚಾರದಲ್ಲೂ ಇದು ನಡೆದಿದೆ. ನಾನು ರಮೇಶ್ ಜಾರಕಿಹೊಳಿ ಪರವಾಗಿ ನಿಲ್ಲುತ್ತೇನೆ, ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಲಿದೆ. ಇದಾದ ಬಳಿಕ ಸತ್ಯಾಸತ್ಯತೆ ಹೊರಬರತ್ತದೆ ಎಂದು ಸಚಿವ ಸಿಪಿ ಯೋಗೇಶ್ವರ್ ತಿಳಿಸಿದರು.


ಸತ್ಯಾಸತ್ಯತೆಗಳು ಅವರಿಗೆ ಗೊತ್ತಿದೆ... ಸಿಎಂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ: ರಾಮದಾಸ್
ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಅವರು ಮಾತನಾಡಿ, 'ಸತ್ಯಾಸತ್ಯತೆಗಳು ಅವರಿಗೆ ಗೊತ್ತಿದೆ. ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟವರು ಅವರ ಜೊತೆ ಮಾತನಾಡುತ್ತಾರೆ. ಸೂಕ್ತವಾದಂತ ನಿರ್ಧಾರಗಳನ್ನು ಅವರು ಕೈಗೊಳ್ಳುತ್ತಾರೆ' ಎಂದು ಹೇಳಿದರು.


ಉನ್ನತ ಮಟ್ಟದ ತನಿಖೆ ಅಗತ್ಯ: ಶಾಸಕ ಎಲ್.ನಾಗೇಂದ್ರ
ಇನ್ನು ಬಿಜೆಪಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, 'ಅದು ಯಾರದ್ದು ಅನ್ನೋದು ತನಿಖೆ ಆಗುತ್ತಿದೆ. ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಬೇಕು. ನಾನೇನು ತಪ್ಪು ಮಾಡಿಲ್ಲ ಅಂತಾ ಸಚಿವ ಜಾರಕಿಹೊಳಿ ಹೇಳಿದ್ದಾರೆ. ಹೀಗಾಗಿ ಸಿಡಿ ವಿಚಾರ ಉನ್ನತ ಮಟ್ಟದಲ್ಲಿ ತನಿಖೆ ಆಗಬೇಕಿದ್ದು, ತಪ್ಪು ಸಾಬೀತಾದರೆ ಹೈಕಮಾಂಡ್ ಕಠಿಣ ಕ್ರಮಕೈಗೊಳ್ಳುತ್ತದೆ' ಎಂದರು.


Comments