ಎಚ್.ಡಿ. ಕುಮಾರಸ್ವಾಮಿ ಶಾಸಕರಾಗಿರುವ ಚನ್ನಪಟ್ಟಣದ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯುವುದು ಬಹುತೇಕ ನಿಶ್ಚಿತವಾಗಿದೆ.
ಈವರೆಗೆ 28 ವಾರ್ಡುಗಳ ಫಲಿತಾಂಶ ಪ್ರಕಟ ಆಗಿದ್ದು, 16ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. 7ರಲ್ಲಿ ಕಾಂಗ್ರೆಸ್ ಹಾಗೂ 5ರಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಇನ್ನು 3 ವಾರ್ಡುಗಳ ಫಲಿತಾಂಶ ಬಾಕಿ ಇದೆ.
ವಿಜಯಪುರ ಪುರಸಭೆ ಚುನಾವಣೆ ಫಲಿತಾಂಶ ಪ್ರಕಟ: ಜೆಡಿಎಸ್-13, ಕಾಂಗ್ರೆಸ್-7 ಪಕ್ಷೇತರ-2, ಬಿಜೆಪಿ -1 ವಾರ್ಡಿನಲ್ಲಿ ಗೆಲುವು ಸಾಧಿಸಿದ್ದಾರೆ.
Comments
Post a Comment