ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರಥ್ಯದ ಎನ್‌ಡಿಎ ಬಲ 300ರ ಸನಿಹ ತಲುಪಿಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಸಿವೋಟರ್-ಐಎಎನ್‌ಎಸ್ ನಡೆಸಿದ ಸಮೀಕ್ಷೆಯು, ಎನ್‌ಡಿಎ 298 ಸ್ಥಾನ ಗಳಿಸಲಿದೆ ಎಂದು ಅಂದಾಜಿಸಿದೆ. ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಇಬ್ಬರಿಗೂ ಸಮಾನ ಅವಕಾಶಗಳಿವೆ. ತಮಿಳುನಾಡು, ಕೇರಳದಲ್ಲಿ ಎನ್‌ಡಿಎ ಹಿಂದುಳಿದಿದೆ ಎಂದೂ ಸಮೀಕ್ಷೆ ತಿಳಿಸಿದೆ.
ಈ ಹಿಂದಿನ ಸಮೀಕ್ಷೆಯಲ್ಲಿ ಸಿ ವೋಟರ್, ಎನ್‌ಡಿಎ 261 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿತ್ತು. ಆದರೆ ಎರಡನೇ ಸಮೀಕ್ಷೆಯಲ್ಲಿ ಬಿಜೆಪಿ ಒಂದೇ 241 ಸೀಟುಗಳಲ್ಲಿ ಸ್ವಂತ ಬಲದಲ್ಲಿ ಜಯಭೇರಿ ಬಾರಿಸಲಿದೆ ಹಾಗೂ ಚುನಾವಣೆಯ ನಂತರದ ಮೈತ್ರಿಯ ನಂತರ ಎನ್‌ಡಿಎ ಸ್ಕೋರ್ 298ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಿದೆ. ಇದಕ್ಕೆ ಬಾಲಾಕೋಟ್ ಉಗ್ರ ಶಿಬಿರಗಳ ಮೇಲೆ ನಡೆಸಿದ ದಾಳಿಯೂ ಕಾರಣವಾಗಿದೆ.
ಸಿ ವೋಟರ್ ಸಮೀಕ್ಷೆ ಪ್ರಕಾರ, ವೈ.ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಆಂಧ್ರಪ್ರದೇಶದ 10 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಬಿಜು ಜನತಾ ದಳ 10 ಸೀಟು, ತೆಲಂಗಾಣ ರಾಷ್ಟ್ರ ಸಮಿತಿ 16 ಮತ್ತು ಮಿಝೊ ನ್ಯಾಷನಲ್ ಫ್ರಂಟ್ 1 ಸೀಟುಗಳಲ್ಲಿ ವಿಜಯ ಗಳಿಸಲಿದೆ. ಒಟ್ಟು 37 ಸೀಟುಗಳು ಹೀಗೆ ಎನ್‌ಡಿಎಗೆ ಚುನಾವಣೋತ್ತರ ಮೈತ್ರಿಯ ನಂತರ ಸಿಗುವ ಸಾಧ್ಯತೆ ಇದೆ. ಆಗ ಎನ್‌ಡಿಎಯ ಒಟ್ಟು ಬಲ 298ಕ್ಕೆ ಏರಿಕೆಯಾಗಲಿದೆ. ಆದ್ದರಿಂದ ಚುನಾವಣೋತ್ತರ ಮೈತ್ರಿ ನಿರ್ಣಾಯಕವಾಗಲಿದೆ ಎಂದಿದೆ.
ಸಿ ವೋಟರ್-ಐಎಎನ್‌ಎಸ್ ಸಮೀಕ್ಷೆಯ ಅಂದಾಜು ಪ್ರಕಾರ ಎನ್‌ಡಿಎ ಮತಗಳಿಕೆ 42% ಏರಿಕೆಯಾಗಲಿದೆ. ಯುಪಿಎ ಮತಗಳಿಕೆ 30.4% ಆಗಲಿದೆ.
ರಾಜ್ಯಗಳಲ್ಲಿ ಎನ್‌ಡಿಎ ಮತಗಳಿಕೆ ಈ ರೀತಿಯಾಗಿದೆ ಬಿಹಾರ: ಶೇ.52.6 , ರಾಜಸ್ಥಾನ: ಶೇ.50.7, ಗುಜರಾತ್: ಶೇ.58.2 , ಉತ್ತರ ಪ್ರದೇಶ: ಶೇ.35.4 , ಮಹಾರಾಷ್ಟ್ರ: ಶೇ.48.1 , ಹರಿಯಾಣ: ಶೇ.42.6
Comments
Post a Comment