ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನಗಳನ್ನು ಪಡೆದರು ಅಧಿಕಾರದ ಗದ್ದುಗೆಯನ್ನು ಏರಲು ಮಾತ್ರ ಸಾಧ್ಯವಾಗಲಿಲ್ಲ. ತದನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಟ್ಟಾಗಿ ಮೈತ್ರಿಯಾಗಿ ಸರ್ಕಾರವನ್ನು ರಚಿಸಿಕೊಂಡವು. ನಂತರದ ದಿನಗಳಲ್ಲಿ ಬಿಜೆಪಿ ಆನೇಕ ಬಾರಿ ಸರ್ಕಾರ ರಚಿಸುವ ಕಸರತ್ತು ನಡೆಸಿದರು ಸಾಧ್ಯವಾಗಲಿಲ್ಲ. ಈಗ ಮತ್ತೆ ಬಿಜೆಪಿ ಅಧಿಕಾರಕ್ಕೆ ಏರುವ ಮಾತುಗಳನ್ನಾಡಿದ್ದಾರೆ.

ಹೌದು, ಉಮೇಶ್​ ಜಾಧವ್​​ ಮೂಲಕ ರಾಜೀನಾಮೆ ಆರಂಭವಾಗಿದೆ. ಬಿಜೆಪಿ ಸರ್ಕಾರ ರಚಿಸುವುದು ಕೆಲವೇ ದಿನಗಳ ಮಾತು. ಕೆಲವೇ ದಿನಗಳಲ್ಲಿ ಬಿಜೆಪಿ ಸರ್ಕಾರ ಬರಲಿದೆ ಎಂದು ಆರ್​ಎಸ್​​ಎಸ್​​ ಸಹ ಸಂಚಾಲಕ ಬಿ.ಎಲ್​. ಸಂತೋಷ್​ ಭವಿಷ್ಯ ನುಡಿದಿದ್ದಾರೆ. ಆರ್ ಎಸ್ ಎಸ್ ಸಹ ಸಂಚಾಲಕರ ಈ ಮಾತು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮೈತ್ರಿ ಸರ್ಕಾರದಲ್ಲಿ ಹಲವರು ಭಿನ್ನಮತೀಯರು ಇರುವುದು ಸತ್ಯ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರ ಎಂಬುದು ಯಕ್ಷ ಪ್ರಶ್ನೆ.

Comments