ಕಾಂಗ್ರೆಸಿಗರ ಸಹವಾಸಕ್ಕೆ ಬೇಸತ್ತು ರಾಜೀನಾಮೆ ಕೊಡಲು ಮುಂದಾದ ಕುಮಾರಸ್ವಾಮಿ!!


ಮುಲಾಜಿನ ದೋಸ್ತಿಗಳ ಜಂಗೀ ಕುಸ್ತಿ ಆರಂಭವಾಗಿದೆ. ಇತ್ತೀಚೆಗಷ್ಟೇ ಈಗಲ್ಟನ್ ರೆಸಾರ್ಟ್ ನಲ್ಲಿ ಕುಸ್ತಿ ಆಡುವ ಮೂಲಕ ಮುಖ ಮೂತಿ ಊದಿಸಿಕೊಂಡಿದ್ದ ಕಾಂಗ್ರೆಸ್ ಶಾಸಕರು ಸುದ್ಧಿಯಾಗಿದ್ದರು. ಆದರೆ ಇದೀಗ ಸ್ವತಃ ದೋಸ್ತಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಸರ್ಕಾರ ಪತನಗೊಳಿಸುವ ಮುನ್ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿ ಮೈತ್ರಿ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ್ದರು. ಕರ್ನಾಟಕದಲ್ಲಿ ಒಂದು ಪಕ್ಷ ಕುಟುಂಬಕ್ಕಾಗಿಯೇ ಕೆಲಸ ಮಾಡುತ್ತಿದೆ. ಆ ಪಕ್ಷದಲ್ಲಿ ಅಪ್ಪ, ಮಗ, ಸೊಸೆ, ಮೊಮ್ಮಕ್ಕಳಿಗೂ ಟಿಕೆಟ್ ಕೊಡ್ತಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸರ್ಕಾರದಲ್ಲಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದ ಹಾಗಾಗಿದೆ.

ಇದರಿಂದ ಆಕ್ರೋಶರಾದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ಹೊಸ ಬಾಂಬ್ ಹಾಕಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಸಮ್ಮಖದಲ್ಲೇ ದೋಸ್ತಿ ಪಕ್ಷ ಕಾಂಗ್ರೆಸ್ಸಿಗೆ ತಪರಾಕಿ ಇಟ್ಟಿದ್ದಾರೆ. “ನನ್ನ ಕಾರ್ಯವೈಖರಿ ನಿಮಗೆ ಇಷ್ಟವಿಲ್ಲ ಎಂದರೆ ನೇರವಾಗಿ ಹೇಳಿಬಿಡಿ. ನಾನು ರಾಜೀನಾಮೆ ನೀಡಲು ಸಿದ್ದನಿದ್ದೇನೆ. ನನಗೆ ಸಾಕಾಗಿ ಹೋಗಿದೆ. ನಾನು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ. ಈ ಕೂಡಲೇ ರಾಜೀನಾಮೆಗೆ ಸಿದ್ಧ” ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರ ಈ ಹೇಳಿಕೆಯ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೇವೇಗೌಡರ ಕುಟುಂಬದ ವಿರುದ್ಧ ಹೇಳಿಕೆ ನೀಡಿದ್ದ ಎಸ್.ಟಿ.ಸೋಮಶೇಖರ್ ಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿದ್ದಾರೆ. ಮೈತ್ರಿ ಸರ್ಕಾರವಿರುವಾಗ ಹೀಗೆಲ್ಲಾ ಹೇಳಿಕೆ ನೀಡಬಾರದು ಎಂಬ ಅರಿವು ನಿಮಗಿಲ್ವೇ? ಇಂತಹಾ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿ ಮಾತ್ರವೇ ನೀಡಬೇಕೇ ಹೊರತು ಬಹಿರಂಗವಾಗಿ ನೀಡುವುದು ತರವಲ್ಲ” ಎಂದು ನೋಟೀಸ್ ಜಾರಿಗೊಳಿಸಿದ್ದಾರೆ.

ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಹಾಗೂ ಜನತಾದಳದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯನವರ ಆಪ್ತ ಶಾಸಕರಾದ ಎಂಟಿಬಿ, ಡಾ.ಸುಧಾಕರ್, ಸೋಮಶೇಖರ್ ಸಹಿತ ಕೆಲ ಶಾಸಕರು ನೀಡುತ್ತಿರುವ ವಿಭಿನ್ನ ಹೇಳಿಕೆಗಳು ಸರ್ಕಾರವನ್ನು ಉರುಳಿಸುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದು ಇದೀಗ ಮತ್ತೆ ಸಿದ್ದು ಶಿಷ್ಯರ ವಿಚಾರವಾಗಿ ಸಿದ್ದರಾಮಯ್ಯನವರ ಮೇಲೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಗರಂ ಆಗಿದ್ದಾರೆ.

-ಏಕಲವ್ಯ

Comments