: ಮತ್ತೊಮ್ಮೆ ಎನ್ ಡಿಎ ಅಧಿಕಾರಕ್ಕೆ ಬಂದಲ್ಲಿ ಸಣ್ಣ ವ್ಯಾಪಾರಿಗಳಿಗೂ ಪಿಂಚಣಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ವ್ಯಾಪಾರಿಗಳ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಅಡಮಾನ ಇಲ್ಲದೇ 50 ಲಕ್ಷ ರೂ. ವರೆಗೆ ಸಾಲ ಸೌಲಭ್ಯ, ಜಿಎಸ್ ಟಿ ನೋಂದಾಯಿತ ಉದ್ಯಮಗಳಿಗೆ 10 ಲಕ್ಷ ರೂ.ವರೆಗೆ ಅಪಘಾತ ವಿಮೆ, ವ್ಯಾಪಾರಿಗಳಿಗೆ ಕ್ರೆಡಿಟ್ ಕಾರ್ಡ್, ಸಣ್ಣ ಮಳಿಗೆದಾರರಿಗೆ ಪಿಂಚಣಿ ಯೋಜನೆ ನೀಡಲು ಬಿಜೆಪಿ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಇನ್ನು ಚಿಲ್ಲರೆ ವ್ಯಾಪಾರಿಗಳಿಗೆ ಅನುವಾಗುವಂತೆ ಹೊಸ ರಿಟೇಲ್ ಪಾಲಿಸಿಯನ್ನು ಜಾರಿಗೆ ತರುವ ಭರವಸೆ ನೀಡಿರುವ ಅವರು, ದೇಶದಲ್ಲಿ ವ್ಯಾಪಾರಿಗಳ ಅಭ್ಯುದಯಕ್ಕಾಗಿ ನ್ಯಾಷನಲ್ ಟ್ರೇಡರ್ಸ್ ವೆಲ್ ಫೇರ್ ಬೋರ್ಡ್ ಸ್ಥಾಪಿಸುವುದಾಗಿ ತಿಳಿಸಿದ್ದಾರೆ.
Comments
Post a Comment