ರಾಜ್ಯ ಸಮ್ಮಿಶ್ರ ಸರಕಾರದ ಭವಿಷ್ಯ ಡೋಲಾಯಮಾನವಾಗಿರುವ ಈ ಸಂದರ್ಭದಲ್ಲಿ ಆಪರೇಶನ್ ಕಮಲ ಇನ್ನೂ ಮುಂದುವರಿದಿದ್ದು, ರಾಜ್ಯ
ಸಚಿವರೊಬ್ಬರಿಗೆ ಹಣದ ಆಮಿಷ ಒಡ್ಡಲಾಗಿದೆ ಎಂಬ ಆರೋಪ ಕೇಳಬರುತ್ತಿದೆ.
ಕಾಂಗ್ರೆಸ್ ಶಾಸಕ ಹಾಗೂ ಹಾಲಿ ಸಚಿವ ರಹೀಂ ಖಾನ್ ಅವರಿಗೆ ಬಿಜೆಪಿಯಿಂದ ಭರ್ಜರಿ ಆಫರ್ ಬಂದಿದೆ ಎಂದು ಹೇಳಲಾಗುತ್ತಿದೆ.
ಇಂದು ಬೆಳಗ್ಗೆ ರಹೀಂ ಖಾನ್ ಅವರು ತಾಜ್ ಹೋಟೆಲ್‌ನಲ್ಲಿರುವ ಸಂದರ್ಭ ಅವರಿಗೆ ಯಡಿಯೂರಪ್ಪ ಅವರ ಆಪ್ತರೊಬ್ಬರು ಕರೆ ಮಾಡಿ ನಮ್ಮ ಪಕ್ಷ ಸೇರುವಂತೆ ಆಹ್ವಾನಿಸಿದ್ದು, 30 ಕೋ.ರೂ. ನೀಡುವ ಆಮಿಷ ಒಡ್ಡಿದ್ದಾರೆ ಎಂಬ ಆರೋಪಿಸಲಾಗಿದೆ.
”ನಮ್ಮ ಪಕ್ಷಕ್ಕೆ ಬಂದಲ್ಲಿ ನೀವು ರಾಜ್ಯ ಬಿಜೆಪಿಯಲ್ಲಿ ಮೊದಲ ಮುಸ್ಲಿಂ ಮಂತ್ರಿಯಾಗುತ್ತೀರಿ. ಉತ್ತರ ಕರ್ನಾಟಕದಲ್ಲಿ ನಿಮ್ಮನ್ನು ಪ್ರಭಾವಿ ಮುಸ್ಲಿಂ ನಾಯಕರಾಗಿ ನಾವು ಬೆಳೆಸುತ್ತೇವೆ” ಎಂದು ಕರೆ ಮಾಡಿರುವ ಪ್ರಭಾವಿ ಬಿಜೆಪಿ ನಾಯಕಿ ಭರವಸೆ ಕೂಡಾ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೂಲಗಳ ಪ್ರಕಾರ, ಶಾಸಕ ರಹೀಮ್ ಖಾನ್ ಅತೃಪ್ತ ಬಣದ ನಾಯಕ ರಮೇಶ್ ಜಾರಕಿಹೊಳಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ತಮ್ಮ ಆಪ್ತರೆಲ್ಲರವನ್ನೂ ಒಗ್ಗೂಡಿಸಿ ರಾಜೀನಾಮೆ ಕೊಡಿಸಿ, ತಮ್ಮ ಸಾಮರ್ಥ್ಯ ತೋರ್ಪಡಿಕೆಗೆ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ. ರಹೀಮ್ ಖಾನ್ ಅವರನ್ನು ರಾಜೀನಾಮೆ ಒಪ್ಪಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿತ್ತು.
Comments
Post a Comment