ಒಂದು ಕಡೆ ಸದನದಲ್ಲಿ ವಿಶ್ವಾಸ ಮತಯಾಚನೆಗೆ ಸಿದ್ಧತೆ ನಡೆದುಕೊಂಡಿದ್ದರೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಫೈಲ್ ಗಳು ವೇಗವಾಗಿ ಮೂವ್ ಆಗುತ್ತಿವೆ.
ಸದನದಲ್ಲಿ ದೋಸ್ತಿ ಸರ್ಕಾರದ ಶಾಸಕರು ಗಲಾಟೆ ಮಾಡುತ್ತಿದ್ದರೆ ಸಿಎಂ ಕುಮಾರಸ್ವಾಮಿ ತಮ್ಮ ಕಚೇರಿಯಲ್ಲಿ ನಿರಂತರ ಕೆಲಸ ಮಾಡುತ್ತಿದ್ದಾರೆ. ದಿನ ಮುಂದಕ್ಕೆ ಹಾಕಬೇಕು ಎಂಬುದು ದೋಸ್ತಿ ಶಾಸಕರ ಲೆಕ್ಕಾಚಾರವಾಗಿದೆ.
ನನ್ನಮೇಲೆ ಒತ್ತಡ ಹೇರಬೇಡಿ, ಇಂದು ರಾತ್ರಿ 9 ಗಂಟೆ ಒಳಗೆ ವಿಶ್ವಾಸ ಮತ ಸಾಬೀತು ಮಾಡಿ. ನಾನು ವಚನ ಭ್ರಷ್ಟನಾಗಲೂ ಸಿದ್ಧನಿಲ್ಲ. 6 ಗಂಟೆ ಎಂದು ಹೇಳಿದ್ದೆ ನೀವು 9 ಗಂಟೆ ಒಳಗೆ ವಿಶ್ವಾಸಮತ ಯಾಚನೆಗೆ ಮುಂದಾಗದಿದ್ದರೆ ನಾನೇ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಫೈನಲ್ ವಾರ್ನಿಂಗ್ ನೀಡಿದ್ದಾರೆ.
Comments
Post a Comment