ನವದೆಹಲಿ [ನ.13] : ರಾಜ್ಯ ವಿಧಾನಸಭೆಯಿಂದ ಅಂದಿನ ಸ್ಪೀಕರ್ ರಮೇಶ್ ಕುಮಾರ್ ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ 17 ಶಾಸಕರು ಸುಪ್ರೀಂ ಕೋರ್ಟ್ ಸಲ್ಲಿಸಿರುವ ಅರ್ಜಿ ಬಗೆಗಿನ ತೀರ್ಪು ಪ್ರಕಟವಾಗಿದೆ. ಇದರೊಂದಿಗೆ ಕಳೆದ ನಾಲ್ಕೂವರೆ ತಿಂಗಳ ರಾಜ್ಯ ರಾಜಕೀಯದ ನಾಟಕೀಯ ಬೆಳವಣಿಗೆಗಳಿಗೆ ತೆರೆ ಬಿದ್ದಂತಾಗಿದೆ. ಅನರ್ಹತೆಯನ್ನು ಅಂಗೀಕಾರ ಮಾಡಿ, ಸ್ಪೀಕರ್ ಆದೇಶ ಎತ್ತಿ ಹಿಡಿದೆ.
ನ್ಯಾ. ವಿ.ರಮಣ ನೇತೃತ್ವದ ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಅವರನ್ನು ಒಳಗೊಂಡ ಪೀಠ ಸ್ಪೀಕರ್ ಆದೇಶ ಎತ್ತಿ ಹಿಡಿದಿದೆ. 17 ಶಾಸಕರನ್ನು ಅನರ್ಹರೆಂದು ತೀರ್ಪು ನೀಡಿದೆ. ಆದರೆ ಡಿಸೆಂಬರ್ 5 ರಂದು ನಡೆಯುವ ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಿದೆ.
ಅನರ್ಹರ ಕ್ಷೇತ್ರಗಳಿಗೆ ಉಪ ಕದನ ಶುರು...
ಜುಲೈನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಸೇರಿದ ಒಟ್ಟು 15 ಶಾಸಕರು ಆಗಿನ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು.
ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ 15 ಶಾಸಕರು ಹಾಗೂ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ಮತ ಯಾಚಿಸುವ ವೇಳೆ ಸದನದಲ್ಲಿ ಅನಾರೋಗ್ಯದ ನೆಪವೊಡ್ಡಿ ಹಾಜರಿರದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹಾಗೂ ರಾಣೆಬೆನ್ನೂರು ಶಾಸಕ ಕೆಪಿಜೆಪಿಯ ಶಂಕರ್ ಅವರನ್ನೂ ಅನರ್ಹಗೊಳಿಸಿ ಆಗಿನ ಸ್ಪೀಕರ್ ರಮೇಶ್ ಕುಮಾರ್ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಜುಲೈ 28ಕ್ಕೆ ಮೊದಲ ಅರ್ಜಿ ಮತ್ತು ಆ. 3 ರಂದು 9ನೇ ಹಾಗೂ ಕೊನೆಯ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ದಾಖಲಾಗಿವೆ.
ಆದರೆ ಈ ಶಾಸಕರ ಮೇಲೆ ಆಯಾ ಪಕ್ಷಗಳ ನಾಯಕರು ನೀಡಿದ ಅನರ್ಹತೆಯ ದೂರನ್ನು ಪರಿಗಣಿಸಿದ ಸ್ಪೀಕರ್ ಇವರನ್ನು ಪ್ರಸಕ್ತ ವಿಧಾನಸಭಾ ಅವಧಿ ಅಂದರೆ 2023ರವರೆಗೆ ವಿಧಾನಸಭೆಯಿಂದ ಅನರ್ಹಗೊಳಿಸಿದ್ದರು.

Comments
Post a Comment