ಬೆಂಗಳೂರು, ನವೆಂಬರ್ 12: ಇತ್ತ ಕಾಂಗ್ರೆಸ್, ಅತ್ತ ಜೆಡಿಎಸ್‌ನಿಂದ ಎರಡೂ ಕಡೆಯಿಂದಲೂ ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ಸಿದ್ದರಾಮಯ್ಯ ಸವಕಲು ನಾಣ್ಯವಾಗಿದ್ದಾರೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್‌ಆರ್ ವಿಶ್ವನಾಥ್ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿರುವ ಅವರು, ಸಿದ್ದರಾನಯ್ಯ ಅವರು ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳುವುದು ತಪ್ಪು, ಈ ಹಿಂದೆ ಇಬ್ಬರೂ ಸೇರಿ ಸರ್ಕಾರ ರಚನೆ ಮಾಡಿ ಈಗ ಜೆಡಿಎಸ್ ಮೇಲೆ ಅಸ್ತ್ರ ಪ್ರಯೋಗಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರ
ನಾಳೆ ಸುಪ್ರೀಂಕೋರ್ಟ್‌ನಲ್ಲಿ ತೀರ್ಮಾನವಾಗಬೇಕು. ಕೋರ್ಟ್ ಆದೇಶ ಬಂದ ಮೇಲೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ಹೊಸ ಕೋಟೆ ಬಿಟ್ಟರೆ ಬೇರೆಲ್ಲೂ ಗೊಂದಲವಿಲ್ಲ. ಒಂದು ಕ್ಷೇತ್ರ ಬಿಟ್ಟುಕೊಡಬೇಕಾದರೆ ಸಾಮಾನ್ಯವಾಗಿ ನೋವು ಇರುತ್ತದೆ. ಕಾರ್ಯಕರ್ತರು, ಬೆಂಬಲಿಗರ ಅಭಿಪ್ರಾಯ ಪಡೆದುಕೊಳ್ಳಬೇಕಾಗುತ್ತದೆ. ಅದನ್ನು ನಮ್ಮ ವರಿಷ್ಠರು ಸರಿ ಪಡಿಸುತ್ತಾರೆ. ನಮ್ಮಲ್ಲಿ ಅಭ್ಯರ್ಥಿಗಳು ಜಾಸ್ತಿ ಇದ್ದಾರೆ ಅದಕ್ಕೆ ಗೊಂದಲ ಏರ್ಪಟ್ಟಿದೆ.
ಸಿಸಿಬಿಯಲ್ಲಿ ನೋಂದಣಿ ಸಾಫ್ಟ್‌ವೇರ್ ತಿರುಚಿ ಮೋಸ
ಈಗಾಗಲೇ ಸಿಸಿಬಿಯಲ್ಲಿ ನೋಂದಣಿ ಸಾಫ್ಟ್‌ವೇರ್‌ಗಳ ತಿರುಚಿ ಮೋಸ ಮಾಡಲಾಗುತ್ತಿದೆ. ಸೈಟ್ ತೆಗೆದುಕೊಳ್ಳುವವರಿಗೆ ಮೋಸ ಮಾಡಿದ್ದಾರೆ. ಅಕ್ಷಮ್ಯ ಅಪರಾಧ ಎಸಗಿದ್ದಾರೆ. ಹಿಂದೆ ಕೂಡ ನಡೆದಿತ್ತು. ಆಗ ಸಬ್ ರಿಜಿಸ್ಟ್ರಾರ್‌ಗಳನ್ನು ಸಸ್ಪೆಂಡ್ ಮಾಡಲಾಗಿತ್ತು. ಅಕ್ರಮ ಬಡಾವಣೆ , ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ ದ್ರೋಹ ಮಾಡಿದ್ದಾರೆ. ದಾಖಲಾತಿ ಆಗದೇ ರಿಜಿಸ್ಟ್ರೇಷನ್ ಮಾಡಿಕೊಟ್ಟಿದ್ದಾರೆ ಎಂದು ಸಿಸಿಬಿಗೆ ದೂರು ಹೋಗಿತ್ತು.
ತನಿಖೆಗೆ ಸಹಕರಿಸದವರ ವಿರುದ್ಧ ಕ್ರಮ
ತನಿಖೆಗೆ ಸಹಕಾರ ನೀಡಿಲ್ಲ ಎಂದರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ , ಒಂದೊಂದು ನೋಂದಣಿಗೂ 20-30 ಸಾವಿರ ದುಡ್ಡು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಕೋಟ್ಯಂತರ ರೂ ಅವ್ಯವಹಾರವಾಗಿದೆ. ಕಂದಾಯ ಸಚಿವರು ಕೂಡ ನನ್ನ ಬಳಿ ಚರ್ಚೆ ಮಾಡಿದ್ದಾರೆ. ಸ್ಮಶಾನ ಜಾಗ, ಕೆರೆ ಜಾಗವನ್ನು ಒತ್ತುವರಿ ಮಾಡಿರುವ ಕುರಿತು ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ.
ಎಲ್ಲಾ ಪಕ್ಷಗಳಲ್ಲೂ ಸಣ್ಣಪಟ್ಟ ವೈಮನಸ್ಸು ಸಹಜ
ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ, ಎಲ್ಲಾ ಪಕ್ಷಗಳಲ್ಲಿ ಸಣ್ಣ ಪುಟ್ಟ ಅಸಮಾಧಾನಗಳು ಸಹಜ , ಎಲ್ಲವೂ ಸರಿ ಹೋಗುತ್ತೆ, ಸಿದ್ದರಾಮಯ್ಯ ಈಗ ಸವಕಲು ನಾಣ್ಯವಾಗಿದ್ದಾರೆ, ಎರಡೂ ಪಕ್ಷದ ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ ಆ ಬೇಸರದಲ್ಲಿ ಸಿದ್ದರಾಮಯ್ಯ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

Comments
Post a Comment