ಬಿಜೆಪಿ ಶಾಸಕರಿಂದ ಡಿಕೆಶಿಯ ಭೇಟಿ!! ಸರ್ಕಾರ ರಚಿಸಲು ಬೇಡಿಕೊಂಡ ಶಾಸಕರು!! ಬಿಜೆಪಿ ಸರ್ಕಾರಕ್ಕೆ ಡೆತ್ ಡೇಟ್ ಫಿಕ್ಸ್ ...

ಕಳೆದ ಬಾರಿ ಬಿಜೆಪಿ ಅಭ್ಯರ್ಥಿಗಳಾಗಿದ್ದ ರಾಜು ಕಾಗೆ ಹಾಗೂ ಅಶೋಕ್‌ ಪೂಜಾರ್‌ ಶಾಸಕ ಡಿಕೆ ಶಿವಕುಮಾರ್‌ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ಕಳೆದ ಬಾರಿ ಕಾಗವಾಡ ಹಾಗೂ ಗೋಕಾಕ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಇವರಿಬ್ಬರು ಈ ಬಾರಿಯೂ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು ಎನ್ನಲಾಗಿದೆ.
ಆದರೆ ಆಪರೇಶನ್‌ ಕಮಲ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿರುವ ಶ್ರೀಮಂತ ಪಾಟೀಲ್‌ ಹಾಗೂ ರಮೇಶ್‌ ಜಾರಕಿಹೊಳಿ ಅವರಿಗೆ ಬಿಜೆಪಿ ಟಿಕೆಟ್‌ ನೀಡಲು ನಿರ್ಧರಿಸಿದೆ.



ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ರಾಜು ಕಾಗೆ ಹಾಗೂ ಅಶೋಕ್‌ ಪೂಜಾರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಈ ಭೇಟಿ ವಿಚಾರ ಕೆಪಿಸಿಸಿ ಸಭೆಯಲ್ಲೂ ಚರ್ಚೆಯಾಗಿದೆ. ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳುತ್ತೇವೆ.

ಟಿಕೆಟ್‌ ನೀಡುವ ಬಗ್ಗೆ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಭೆ ಬಳಿಕ ಹೇಳಿದ್ದಾರೆ ಎಂದು ತಿಳಿದುಬಂದಿದೆ ಎನ್ನಲಾಗಿದೆ. ಗೋಕಾಕ್‌ ಕ್ಷೇತ್ರದಿಂದ ಲಖನ್‌ ಜಾರಕಿಹೊಳಿಗೆ ಟಿಕೆಟ್‌ ನೀಡಲು ಸಿದ್ದರಾಮಯ್ಯಬಣ ಸಿದ್ಧತೆ ನಡೆಸಿದೆ. ಆದರೆ ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದ ಅಶೋಕ್‌ ಪೂಜಾರ್‌ರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಇನ್ನೊಂದು ಬಣ ಪಟ್ಟು ಹಿಡಿದಿದೆ.

ಲಖನ್‌, ಹುಕ್ಕೇರಿ, ರಿಜ್ವಾನ್‌ಗೆ ವಿರೋಧ: ಶಿವಾಜಿನಗರದಿಂದ ರಿಜ್ವಾನ್‌ ಅರ್ಷದ್‌, ಗೋಕಾಕ್‌ದಿಂದ ಲಖನ್‌ ಜಾರಕಿಹೊಳಿ ಹಾಗೂ ಕಾಗವಾಡದಿಂದ ಪ್ರಕಾಶ್‌ ಹುಕ್ಕೇರಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಸಿದ್ದರಾಮಯ್ಯ ಬಣದ ವಿರುದ್ಧ ಮೂಲ ಕಾಂಗ್ರೆಸಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಲಖನ್‌ಗೆ ಟಿಕೆಟ್‌ ನೀಡಿದರೆ ಜಾರಕಿಹೊಳಿ ಸೋದರರು ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ. ಕಾಗವಾಡದಲ್ಲಿ ಪ್ರಕಾಶ್‌ ಹುಕ್ಕೇರಿಗೆ ಟಿಕೆಟ್‌ ನೀಡಿದರೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಇರುವುದಿಲ್ಲ.

Comments