ಬಿಜೆಪಿ ಸರ್ಕಾರದ ಮೊದಲ ವಿಕೆಟ್ ಪತನ , ಬಿ ಎಸ್ ವೈ ಬಲಗೈ ಬಂಟ ರಾಜೀನಾಮೆ ಕೊಟ್ಟು ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆ


ಬಿಎಸ್'ವೈ ಆಪ್ತ ಜೆಡಿಎಸ್ ಸೇರ್ಪಡೆ
By Suvarna Web DeskFirst Published 23, Jan 2018, 10:54 AM IST
HIGHLIGHTS
ಯಡಿಯೂರಪ್ಪ ಬಲಗೈ ಬಂಟ ಮಂಜುನಾಥ ಗೌಡ ಜೆಡಿಎಸ್'ಗೆ  ಸೇರ್ಪಡೆಯಾಗಿದ್ದಾರೆ. ತೀರ್ಥಹಳ್ಳಿಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಬಿಎಸ್'ವೈ ಆಪ್ತ ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.  ಶಾಸಕ ಮಧು ಬಂಗಾರಪ್ಪ, ಶಿವಮೊಗ್ಗದ ಜಿಲ್ಲಾ ಜೆಡಿಎಸ್ ಅದ್ಯಕ್ಷ  ಶ್ರೀಕಾಂತ್ ,ಮಾಜಿ ಶಾಶಕ ನಾಡಗೌಡ, ಅನ್ನದಾನಿ ಸಮ್ಮುಖದಲ್ಲಿ  ಜೆಡಿಎಸ್ ಸೇರ್ಪಡೆ ಮಂಜುನಾಥ್ ಗೌಡ ಜೆಡಿಎಸ್'ಗೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರ: ಯಡಿಯೂರಪ್ಪ ಬಲಗೈ ಬಂಟ ಮಂಜುನಾಥ ಗೌಡ ಜೆಡಿಎಸ್'ಗೆ  ಸೇರ್ಪಡೆಯಾಗಿದ್ದಾರೆ. ತೀರ್ಥಹಳ್ಳಿಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಬಿಎಸ್'ವೈ ಆಪ್ತ ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.  ಶಾಸಕ ಮಧು ಬಂಗಾರಪ್ಪ, ಶಿವಮೊಗ್ಗದ ಜಿಲ್ಲಾ ಜೆಡಿಎಸ್ ಅದ್ಯಕ್ಷ  ಶ್ರೀಕಾಂತ್ ,ಮಾಜಿ ಶಾಶಕ ನಾಡಗೌಡ, ಅನ್ನದಾನಿ ಸಮ್ಮುಖದಲ್ಲಿ  ಜೆಡಿಎಸ್ ಸೇರ್ಪಡೆ ಮಂಜುನಾಥ್ ಗೌಡ ಜೆಡಿಎಸ್'ಗೆ ಸೇರ್ಪಡೆಯಾಗಿದ್ದಾರೆ.

ಮಂಜುನಾಥ ಗೌಡರನ್ನು ದೇವೇಗೌಡರು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.  ಡಿಸಿಸಿ ಬ್ಯಾಂಕ್ ಪ್ರಕರಣ ವಿಚಾರದಲ್ಲಿ ಮಂಜುನಾಥ ಗೌಡ ಪರ ದೇವೇಗೌಡರು  ಬ್ಯಾಟಿಂಗ್  ಮಾಡಿದ್ದಾರೆ.  ಯಾರನ್ನು ಬೇಕಾದರೂ ಪ್ರಕರಣಗಳಲ್ಲಿ ಸೇರಿಸಬಹುದು. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇರುತ್ತೆ. ಬಿಜೆಪಿಯಲ್ಲಿ  ಎಷ್ಟು ಕಿರುಕುಳ   ಇದೆ  ಅನ್ನೋದು ಮಂಜುನಾಥ ಗೌಡರ ಸೇರ್ಪಡೆಯಿಂದಲೇ ಗೊತ್ತಾಗುತ್ತೆ ಎಂದು  ದೇವೇಗೌಡರು  ಹೇಳಿದ್ದಾರೆ.

ನಾನು ಮಾತೃ ಪಕ್ಷಕ್ಕೆ ವಾಪಸ್ಸಾಗಿದ್ದೇನೆ.  1986-96 ರ ವರೆಗೆ ಜೆಡಿಎಸ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ತೀರ್ಥಹಳ್ಳಿಯಲ್ಲಿ ಬೃಹತ್ ಸಭೆ ನಡೆಸಲು ತೀರ್ಮಾನಿಸಿದ್ದೇನೆ. ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಲು ಬದ್ದನಾಗಿದ್ದೇನೆ ಎಂದು ಮಂಜುನಾಥಗೌಡ ಹೇಳಿದ್ದಾರೆ.

Comments