ಎಂ ಬಿಎಸ್ ಯಡಿಯೂರಪ್ಪ ಅವರ ಆಡಿಯೋವನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಪ್ರತ್ಯೇಕ ವಿಚಾರಣೆ ಬೇಡ, ತೀರ್ಪಿನ ವೇಳೆ ಪರಿಗಣಿಸುವುದಾಗಿ ತಿಳಿಸಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಹೇಳಿದ್ದಾರೆ.
ಇತ್ತೀಚಿಗೆ ಯಡಿಯೂರಪ್ಪ ಅವರು ಆಡಿಯೋ ಸುಪ್ರೀಂ ಅಂಗಳದಲ್ಲಿದೆ. ಆಡಿಯೋ ಸಾಕ್ಷ್ಯ ಅಲ್ಲ ಎಂದ ಸುಪ್ರೀಂ ಕೋರ್ಟ್ ಹೇಳಿದೆ ಎಂದಿದ್ದರು. ಈ ಸಂಬಂಧ ಜಿಲ್ಲೆಯಲ್ಲಿಂದು ಗಾಂಧಿ 150 ಸಮಾವೇಶದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ನಲ್ಲಿ ಕಾಂಗ್ರೆಸ್ ವಾದಕ್ಕೆ ಹಿನ್ನಡೆಯಾಗಿಲ್ಲ, ಪ್ರತ್ಯೇಕ ವಿಚಾರಣೆಗೆ ಕೊರ್ಟ್ಗೆ ಕೋರಿದ್ದೆವು ಇದಕ್ಕೆ ಸುಪ್ರೀಂ ಒಪ್ಪಿದೆ. ಹೀಗಾಗಿ ಇದಕ್ಕೆ ಹಿನ್ನಡೆ ಹೇಗಾಗುತ್ತೆ? ಎಂದು ಸಿದ್ದರಾಮಯ್ಯ ಅವರು ಬಿಎಸ್ವೈ ಅವರನ್ನು ಪ್ರಶ್ನಿಸಿದರು.
ಅಂತೆಯೇ ಮಾತನಾಡಿದ ಅವರು, ಸಿದ್ದರಾಮಯ್ಯ ಅಂದರೆ ಬಿಜೆಪಿಗೆ ಭಯ. ಹೀಗಾಗಲೇ ಬಿಜೆಪಿಯವರು ಸಿದ್ದರಾಮಯ್ಯನೇ ನಮ್ಮನ್ನು ಸೋಲಿಸುವುದು ಎಂದು ಭಯಬೀಳುತ್ತಿದ್ದಾರೆ. ಮತ್ತೆ ನಾನು ಸಿಎಂ ಆಗ್ತೀನಿ ಎಂದು ಭಯ ಹೀಗಾಗಿ ಪದೇ ಪದೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.

Comments
Post a Comment