ಕೊನೆಗೂ ಮುನಿಸಿಕೊಂಡ ಬಿ ಎಸ್ ವೈ ಬಲ ಗೈ ಬಂಟ , ಬಿಜೆಪಿ ಗೆ ರಾಜೀನಾಮೆ ನೀಡಿದ ಬಲಿಷ್ಠ ನಾಯಕ


ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಿಂದಾಗಿ ತೀವ್ರ ಬೇಸರಗೊಂಡಿರುವ ಬಿಜೆಪಿಯ ಮಾಜಿ ಶಾಸಕ ರಾಜು ಕಾಗೆ ಶೀಘ್ರದಲ್ಲೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಅತೃಪ್ತರಿಗೆ ಟಿಕೆಟ್ ಹೇಳಿಕೆಯಿಂದ ಬೇಸರಗೊಂಡು ಬಿಜೆಪಿಗೆ ರಾಜೀನಾಮೆ ನೀಡಲು ಮಾಜಿ ಶಾಸಕ ರಾಜು ಕಾಗೆ ನಿರ್ಧಾರ?

ಆಡಿಯೋದಲ್ಲಿ ಕಾಂಗ್ರೆಸ್ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಅವರಿಗೆ ಕಾಗವಾಡ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವುದಾಗಿ ಹೇಳಿಕೆ ನೀಡಿರುವುದು ಅದೇ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ ಅವರನ್ನು ತೀವ್ರವಾಗಿ ಕೆರಳಿಸಿದೆ.

ಅತೃಪ್ತ ಶಾಸಕರಿಗೆ ಮಣೆ ಹಾಕುವುದಾದರೆ ನಾವು ಯಾಕೆ ಇರಬೇಕು? ಯಡಿಯೂರಪ್ಪ ಮಾತ್ರ ಏನು ಬೇಕಾದರೂ ಮಾಡಿ ಅಧಿಕಾರಕ್ಕೆ ಬರಬಹುದು. ನಾವು ಮಾತ್ರ ನೋಡ್ತಾ ಸುಮ್ಮನೆ ಕೂರಬೇಕಾ? ಇಂತವರ ಜೊತೆಗೆ ಇರುವುದಕ್ಕಿಂತ ಹೊರ ಹೋಗುವುದೇ ಲೇಸು ಎಂದು ರಾಜು ಕಾಗೆ ಅವರು ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.

Comments