ಇದೀಗ ಬಂದ ಸುದ್ದಿ !! ಕೆಪಿಸಿಸಿ ಯ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿದ ಸೋನಿಯಾ ಗಾಂಧಿ , ಸಿದ್ದರಾಮಯ್ಯ ಆತನಿಗೆ ಒಳಿದ ಅದೃಷ್ಟ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ ಅನ್ನೋ ಕುತೂಹಲಕ್ಕೆ ಸದ್ಯದಲ್ಲಿಯೇ ತೆರೆಬೀಳಲಿದೆ. ಶೀಘ್ರದಲ್ಲಿಯೇ ನೂತನ ಸಾರಥಿಯನ್ನ ಹೈಕಮಾಂಡ್ ಅಧಿಕೃತವಾಗಿ ಘೋಷಿಸಲಿದೆ. ಆದರೆ, ಪ್ರತಿಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕರಾಗಿ ಹೊಸಬರು ನೇಮಕವಾಗ್ತಾರಾ ಅಥವಾ ಸಿದ್ದು ಮುಂದುವರಿತಾರಾ ಅನ್ನೋ ಕುತೂಹಲಕ್ಕೂ ಸೋನಿಯಾ ಗಾಂಧಿ ಬ್ರೇಕ್ ಹಾಕಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆ ಬಹುತೇಕ ಅಂಗೀಕಾರವಾಗಲಿದ್ದು, ಶೀಘ್ರ ನೂತನ ಅಧ್ಯಕ್ಷರ ನೇಮಕವಾವೈಗಲಿದೆ. ಹೈಕಮಾಂಡ್ ಸೂಚನೆ ಮೇರೆಗೆ ಬೆಂಗಳೂರಿಗೆ ಬಂದಿದ್ದ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣ್ ದಾಸ್ ನಡೆಸಿದ ಒನ್ ಟು ಒನ್ ಸಭೆಯಲ್ಲಿ ಹಲವರು ಡಿಕೆಶಿ ಹೆಸರು ಪ್ರಸ್ತಾಪಿಸಿದ್ದಾರೆ. ಈ ತಂಡ ನಾಳೆ ಸೋನಿಯಾ ಗಾಂಧಿಗೆ ವರದಿ ನೀಡಲಿದೆ. ಶೀಘ್ರದಲ್ಲೇ ಹೈಕಮಾಂಡ್ ಘೋಷಣೆ ಹೊರಬೀಳಲಿದೆ. ಪರಮೇಶ್ವರ್, ಹೆಚ್.ಕೆ.ಪಾಟೀಲ್ ಹಾಗೂ ರಾಮಲಿಂಗಾರೆಡ್ಡಿ ಪ್ರಬಲ ಸ್ಪರ್ಧೆ ನಡುವೆಯೂ ಡಿಕೆಶಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಡಿಕೆಶಿ, ನನಗೆ ಏನೂ ಗೊತ್ತಿಲ್ಲ ಅಂತ ಮುಗುಳ್ನಗುತ್ತಲೇ ತೆರಳಿದರು.
ಬೈಎಲೆಕ್ಷನ್ ಸೋಲಿನ ನೈತಿಕ ಹೊಣೆಹೊತ್ತು ವಿರೋಧ ಪಕ್ಷ ನಾಯಕ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷ ನಾಯಕನ ಸ್ಥಾನಕ್ಕೆ ಸಿದ್ದು ರಾಜೀನಾಮೆ ಕೊಟ್ಟಿದ್ದಾರೆ. ಆದ್ರೆ, ರಾಜೀನಾಮೆ ಅಂಗೀಕಾರ ಆಗುವ ಸಾಧ್ಯತೆ ಇಲ್ಲ. ಹೀಗಾಗಿ, ವಿರೋಧ ಪಕ್ಷ ನಾಯಕರಾಗಿ ಮುಂದುವರಿಯುವ ಸಾಧ್ಯತೆ ಇದೆ. ಬೆಂಗಳೂರಿಗೆ ಬಂದಿದ್ದ ಮಧುಸೂದನ್ ಮಿಸ್ತ್ರಿ ಅವರು ಸಿದ್ದು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸೋನಿಯಾ ಪರಮಾಪ್ತ ಅಹ್ಮದ್ ಪಟೇಲ್, ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ಹಿರಿಯರ ಮನವೊಲಿಕೆಗೆ ಸಿದ್ದು ಬಗ್ಗಿರಲಿಲ್ಲ. ಆದ್ರೆ, ಮೊನ್ನೆ ಮಿಸ್ತ್ರಿ, ನೀವು ವಿರೋಧ ಪಕ್ಷ ನಾಯಕರಾಗಿ ಮುಂದುವರಿಯಲೇಬೇಕು. ಕೆಪಿಸಿಸಿಗೆ ಸಮರ್ಥರನ್ನು ನೇಮಕ ಮಾಡೋಣ. ನೀವಿಬ್ಬರೂ ಸೇರಿ ಮತ್ತೆ ಪಕ್ಷವನ್ನ ಅಧಿಕಾರಕ್ಕೆ ತರಬೇಕೆಂದು ಮನವೊಲಿಸಿದ್ದಾರೆ. ಹೀಗಾಗಿ, ನಾಲ್ಕೈದು ದಿನಗಳಲ್ಲಿ ದೆಹಲಿಗೆ ಕರೆಸಿಕೊಂಡು ಸೋನಿಯಾ ಮತ್ತೆ ಜವಾಬ್ದಾರಿ ಹೊರಿಸಲಿದ್ದಾರೆ ಅಂತ ಹೇಳಲಾಗಿದೆ. ಸಿದ್ದು ಕೂಡ ವಿರೋಧ ಪಕ್ಷ ನಾಯಕ ಸ್ಥಾನದಲ್ಲಿ ಮುಂದುವರಿಯುವ ಸುಳಿವು ನೀಡಿದ್ದಾರೆ.
ಡಿಕೆಶಿಗೆ ಕೆಪಿಸಿಸಿ ಸಾರಥ್ಯ ವಹಿಸುವಂತೆ ಆಯ್ದ 54 ನಾಯಕರಲ್ಲಿ 30ಕ್ಕೂ ಹೆಚ್ಚು ಮುಖಂಡರು ಮಿಸ್ತ್ರಿಗೆ ಮನವಿ ಮಾಡಿದ್ದಾರಂತೆ. ಅಲ್ಲದೆ, ವಿರೋಧ ಪಕ್ಷ ನಾಯಕ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿದರೆ ಉತ್ತಮ. ಪರಂಗೆ ಬೇಕಾದರೆ ರಾಷ್ಟ್ರಮಟ್ಟದಲ್ಲಿ ಸ್ಥಾನಮಾನ ಒದಗಿಸಿ ಅಂತ ಸಲಹೆ ನೀಡಿದ್ದಾರೆ. ಡಿಕೆಶಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಒಕ್ಕಲಿಗ ಸಮುದಾಯಕ್ಕೆ ಅವಕಾಶ ಸಿಕ್ಕಂತಾಗುತ್ತದೆ. ಈಗಾಗಲೇ ಒಕ್ಕಲಿಗರು ಜೆಡಿಎಸ್ನಿಂದ ದೂರ ಸರಿಯುತ್ತಿದ್ದಾರೆ. ಡಿಕೆಶಿಗೆ ಯುವಕರನ್ನು ಸೆಳೆಯುವ ಶಕ್ತಿಯಿದೆ. ಸಮುದಾಯವನ್ನೂ ಜೊತೆಗೆ ಸೇರಿಸಿಕೊಳ್ಳೋ ಯುಕ್ತಿಯಿದೆ. ಅಲ್ಲದೆ, ಸಿದ್ದರಾಮಯ್ಯ ಅವರಂತೆ ಜನರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಾರೆ ಅಂತ ವಿವಿಧ ನಾಯಕರು ಹೇಳಿದ್ದಾರೆ.
ಯಡಿಯೂರಪ್ಪ, ಕುಮಾರಸ್ವಾಮಿಗಿಂತ ಹೆಚ್ಚು ಜನಬೆಂಬಲ ಇರುವ ನಾಯಕ ಸಿದ್ದರಾಮಯ್ಯ. ದಲಿತ, ಹಿಂದುಳಿದ, ಅಲ್ಪಸಂಖ್ಯಾತರನ್ನು ಹಿಡಿದಿಡುವ ಶಕ್ತಿ ಅವರಿಗೆ ಮಾತ್ರ ಇದೆ. ಹೀಗಾಗಿ, ಡಿಕೆಶಿ ಮತ್ತು ಸಿದ್ದು ಕಾಂಬಿನೇಶನ್ ಪಕ್ಷಕ್ಕೆ ಒಳಿತು ತರಲಿದೆ ಅಂತ ತಿಳಿಸಿದ್ದಾರೆ. ಮತ್ತೊಂದೆಡೆ, ಪರಮೇಶ್ವರ್ ಕಡೆಗಣನೆ ಮಾಡಿದ್ರೂ ನಷ್ಟ. ಅವರು ಉತ್ತಮ ಶಿಕ್ಷಣ ಪಡೆದವರು, ಭಾಷೆಗಳ ಮೇಲೆ ಹಿಡಿತ ಹೊಂದಿದವರು. ಕಾರ್ಯಕ್ರಮ ರೂಪಿಸಿ ಅನುಷ್ಟಾನಕ್ಕೆ ತರುವಲ್ಲಿ ಅಗಾಧ ಶಕ್ತಿ ಇದೆ. ಹೀಗಾಗಿ, ಅವರಿಗೆ ರಾಷ್ಟ್ರಮಟ್ಟದಲ್ಲಿ ಸ್ಥಾನಮಾನ ಕಲ್ಪಿಸಿದ್ರೆ ಪಕ್ಷ ಅಲ್ಲಿಯೂ ಸದೃಢವಾಗಲಿದೆ. ಅವರ ಸಹಕಾರ ಇಲ್ಲಿಯೂ ಸಿಗಲಿದೆ.
ಹೀಗಾಗಿ, ಡಿಕೆಶಿ, ಸಿದ್ದು ಮತ್ತು ಪರಮೇಶ್ವರ್‌ಗೆ ಜವಾಬ್ದಾರಿ ನೀಡಿ ಅಂತ ಮಿಸ್ತ್ರಿ ಮುಂದೆ ಕಾಂಗ್ರೆಸ್ ನಾಯಕರು ಬೇಡಿಕೆ ಇಟ್ಟಿದ್ದಾರೆ. ಇದ್ರಿಂದ ಈ ಮೂವರಿಗೂ ಅವಕಾಶ ನೀಡುವ ಚಿಂತನೆ ಹೈಕಮಾಂಡ್ ನಡೆಸಿದ್ದು, ಸಕ್ರಾಂತಿಯೊಳಗೆ ನೇಮಕಾತಿ ನಡೆಯಲಿದೆ.
Comments
Post a Comment