ಇದೀಗ ಬಂದ ಸುದ್ದಿ !! ವಿಪಕ್ಷ ನಾಯಕ ಸಿದ್ದರಾಮಯ್ಯ ಜೈಲಿಗೆ , ದಾಳಿಯಲ್ಲಿ ಸಫಲವಾದ ಬಿಜೆಪಿ ನಾಯಕ


ಸಿದ್ದರಾಮಯ್ಯ ವಿರುದ್ಧ ಸದಾ ಹರಿತ ಮಾತುಗಳಿಂದ ತಿವಿಯುವ ಸೊಗಡು ಶಿವಣ್ಣ ಅದೇ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಏಕ ವಚನದಲ್ಲಿ ಮಾತನಾಡುವುದರಲ್ಲಿ ಪರಮೋಚ್ಚ ನಾಯಕ ಎಂದು ಶಿವಣ್ಣ ಟೀಕಿಸಿದ್ದಾರೆ. ಇಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಸಿದ್ದರಾಮಯ್ಯ ಅವರನ್ನು ದುರ್ಯೋಧನನಿಗೆ ಹೋಲಿಕೆ ಮಾಡಿದ್ದಾರೆ.

“ಮಾತ್ತೆತ್ತಿದರೆ ಇವರು ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಅಂತಾರೆ. ಇವರಲ್ಲಿ ಮನಿ ಉಗ್ರವಾದಿಗಳು ಇಲ್ಲವಾ? ಜೈಲಿಗೆ ಹೋಗಿ ಬಂದಿಲ್ಲವಾ?” ಎಂದು ಪ್ರಶ್ನಿಸಿದ ಅವರು ಅರ್ಕಾವತಿ ಹಗರಣವನ್ನು ಪ್ರಸ್ತಾಪಿಸಿದ್ದಾರೆ.


ನೀನೂ ಜೈಲಿಗೆ ಹೋಗುವೆ ಇರಪ್ಪಾ. ಅರ್ಕಾವತಿ ಹಗರಣ ಇಲ್ವಾ? ಲೋಕಾಯುಕ್ತವನ್ನು ಕಿತ್ತು ಎಸಿಬಿ ಮಾಡಿಕೊಂಡು ಅರ್ಕಾವತಿ ಹಗರಣದಿಂದ ಬಚಾವ್ ಆದ. ನಾವು ನಾಟಕ ನೋಡುವಾಗ ಭೀಮ, ಅರ್ಜುನರ ಪಾತ್ರಗಳನ್ನ ನೋಡುತ್ತೇವೆ. ದುರ್ಯೋಧನನ ಮಾತನ್ನೂ ನೆನಪಿಸಿಕೊಳ್ಳುತ್ತೇವೆ.


ಹಾಗೆಯೇ ಸಿದ್ದರಾಮಯ್ಯ ಕೂಡ ಏಕವಚನದಲ್ಲಿ ಮಾತನಾಡುತ್ತಾರೆ. ದುರ್ಯೋಧನನನ್ನು ನೆನಪಿಸಿಕೊಳ್ಳುವಂತೆ ಸಿದ್ದರಾಮಯ್ಯ ಕೂಡ ಆಗಾಗ ನೆನಪಾಗುತ್ತಾರೆ” ಎಂದು ಸೊಗಡು ಶಿವಣ್ಣ ವ್ಯಂಗ್ಯವಾಡಿದ್ದಾರೆ.


ಸಾವರ್ಕರ್ ವಿರುದ್ಧ ಟೀಕೆ ಮಾಡಿದ್ದಕ್ಕೆ ಸಿದ್ದರಾಮಯ್ಯ ಅವರನ್ನು ಜಾತಿ ಟೆರರಿಸ್ಟ್ ಎಂದು ತಾನು ನೀಡಿದ್ದ ಹೇಳಿಕೆಯನ್ನು ಸೊಗಡು ಶಿವಣ್ಣ ಸಮರ್ಥಿಸಿಕೊಂಡಿದ್ಧಾರೆ.


Comments