ಬ್ರೇಕಿಂಗ್ ನ್ಯೂಸ್ !! ಕರ್ನಾಟಕಕ್ಕೆ ನೂತನ ರಾಜ್ಯಪಾಲರನ್ನು ಘೋಷಿಸಿದ ರಾಷ್ಟ್ರಪತಿ, ನೂತನ ರಾಜ್ಯಪಾಲೆಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟ ಮೋದಿ ಆಪ್ತೆ

 


ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ. ಆರಿಫ್ ಮಹಮದ್ ಖಾನ್ ಕೇರಳ ರಾಜ್ಯಪಾಲರಾಗಿದ್ದರೆ, ತಮಿಳಿಸೈ ಸೌಂದರರಾಜನ್ ತೆಲಂಗಾಣ, ಭಗತ್ ಸಿಂಗ್ ಕೋಶ್ಯಾರಿ ಮಹಾರಾಷ್ಟ್ರ, ಕಲ್ರಾಜ್ ಮಿಶ್ರಾ ರಾಜಸ್ಥಾನ ಹಾಗೂ ಬಂಡಾರು ದತ್ತಾತ್ರೇಯ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.



 

ಇನ್ನು ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರ ಅಧಿಕಾರವಧಿ ಸೆಪ್ಟೆಂಬರ್ 7ಕ್ಕೆ ಮುಕ್ತಾಯವಾಗಲಿದ್ದು, ಅವರನ್ನು ಸಿಕ್ಕಿಂಗೆ ವರ್ಗಾಯಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕರ್ನಾಟಕದ ನೂತನ ರಾಜ್ಯಪಾಲರಾಗಿ ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ನೇಮಕಗೊಳ್ಳುವ ಸಾಧ್ಯತೆ ದಟ್ಟವಾಗಿದೆ.



Image result for ಸುಮಿತ್ರಾ ಮಹಾಜನ್

ಕರ್ನಾಟಕದಲ್ಲಿ ಪ್ರಸಕ್ತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಾಗೂ ಮಧ್ಯಂತರ ಚುನಾವಣೆ ನಡೆಯಬಹುದೆಂಬ ಕಾರಣಕ್ಕೆ ನೂತನ ರಾಜ್ಯಪಾಲರ ನೇಮಕ ವಿಚಾರ ಮಹತ್ವ ಪಡೆದುಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಸುಮಿತ್ರಾ ಮಹಾಜನ್ ಸ್ಪರ್ಧಿಸದೆ ಕಣದಿಂದ ದೂರ ಉಳಿದಿದ್ದು, ಈಗ ಅವರಿಗೆ ಮಹತ್ವದ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗಿದೆ.


Image result for ಮಾಜಿ ಸಚಿವೆ ಉಮಾ ಭಾರತಿ

ರಾಜ್ಯಪಾಲ ಹುದ್ದೆಗೆ ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಹಾಗೂ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಹೆಸರು ಈಗ ಮುಂಚೂಣಿಗೆ ಬಂದಿದೆ. ಅದರಲ್ಲೂ ಇವರಿಬ್ಬರ ಹೆಸರು ಕರ್ನಾಟಕದ ರಾಜ್ಯಪಾಲ ಹುದ್ದೆ ಬಲವಾಗಿ ಕೇಳಿ ಬಂದಿದೆ. ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಸದ್ಯ 80ಪ್ಲಸ್ ವಯಸ್ಸಾಗಿದ್ದು, ಅವರ ಅಧಿಕಾರ ಅವಧಿ ಸೆಪ್ಟೆಂಬರ್‌ ತಿಂಗಳಿಗೆ ಐದು ವರ್ಷ ಪೂರ್ಣಗೊಳ್ಳಲಿದೆ.


Comments