ಶಿರಾ ಉಪಚುನಾವಣೆ ಮೊದಲೇ ಭರ್ಜರಿ ಜಯ ಸಾಧಿಸಿದ ಬಿಜೆಪಿ !! ಭವಿಷ್ಯ ,ಸಮೀಕ್ಷೆಯಲ್ಲಿ ಬಿಜೆಪಿ ಎಷ್ಟು ಅಂತರದಲ್ಲಿ ಗೆಲ್ಲಲಿದೆ ಗೊತ್ತಾ ??




ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುತ್ತೆನೆ ಅಂತ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಸಹಸ್ರಾರು ಜನರ ಮುಂದೆ ವಾಗ್ದಾನ ನೀಡಿದ್ದಾರೆ, ಕೊಟ್ಟಮಾತಿನಂತೆ ಹೇಮಾವತಿ ನೀರು ಮದಲೂರು ಕೆರೆಗೆ ಹರಿಯುವ ಸಂಭ್ರಮವನ್ನು ಶಿರಾ ಕ್ಷೇತ್ರದ ಜನ ಕಾಣಲಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳನ್ನು ಕಂಡಿರುವ ಜನ ಈ ಬಾರಿ ಬದಲಾವಣೆ ಬಯಸಿದ್ದು ರಾಜೇಶ್‌ ಗೌಡ ಗೆಲುವು ಖಚಿತ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವಥ್‌ ನಾರಾಯಣ ಹೇಳಿದರು.


ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಅವರನ್ನು ಶನಿವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.



 

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿ ಮತ ನೀಡಿ ಗೆಲ್ಲಿಸಿದರೆ ವಿಧಾನಸೌಧದಲ್ಲಿ ಪ್ರತಿಪಕ್ಷದಲ್ಲಿ ಕುಳಿತು ಕೊಳ್ಳಬೇಕಾಗುತ್ತದೆ. ಬಿಜೆಪಿ ಪಕ್ಷದ ರಾಜೇಶ್‌ ಗೌಡ ಗೆದ್ದರೆ ಶಿರಾ ಕ್ಷೇತ್ರ ಹೆಚ್ಚು ಆಭಿವೃದ್ಧಿ ಕಾಣಲಿದೆ. ಈ ನಿಟ್ಟಿನಲ್ಲಿ ಶಿರಾ ಜನತೆ ತೀರ್ಮಾನಿಸಿದ್ದು ಭಾರತೀಯ ಜನತಾ ಪಾರ್ಟಿಗೆ ಮತ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.


ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ ಗೌಡ ಮಾತನಾಡಿ, ಶಿರಾ ಜನತೆ ನೀಡುತ್ತಿರುವ ಅಭೂತ ಪೂರ್ವ ಬೆಂಬಲಕ್ಕೆ ಚಿರರುಣಿಯಾಗಿದ್ದು, ಕ್ಷೇತ್ರದ ಜನರ ಬಹುದಿನಗಳ ಬೇಡಿಕೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದು ನನ್ನ ಪ್ರಥಮ ಆದ್ಯತೆ. ರಸ್ತೆ ಆಭಿವೃದ್ಧಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಶಾಶ್ವತ ಯೋಜನೆ ರೂಪಿಸುವ ಗುರಿ ಹೊಂದಿರುವ ನನಗೆ ಒಂದು ಆವಕಾಶ ಕೊಟ್ಟು ನೋಡಿ ಎಂದು ಮನವಿ ಮಾಡಿದರು.


ಅಗ್ನೇಯ ಪದವಿಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ.ಗೌಡ ಮಾತನಾಡಿ, ಅಗ್ನೇಯ ಪದವೀಧರರ ಕ್ಷೇತ್ರದಲ್ಲಿ ನನಗೆ ಬೆಂಬಲಿಸಿ ಮತ ನೀಡಿದ ಪ್ರತಿಯೊಬ್ಬ ಪದವಿದರ ಮತದಾರನಿಗೆ ಕೃತಜ್ಞತೆಗಳು. ನಿಮ್ಮ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುವೆ. ಶಿರಾ ಕ್ಷೇತ್ರದಲ್ಲಿ ಯುವಕರು ಹಾಗೂ ಜನ ಸಾಮಾನ್ಯರು ಬಿಜೆಪಿ ಪಕ್ಷದ ಕಡೇ ಹೆಚ್ಚು ವಿಶ್ವಾಸ ಬೆಂಬಲಿಸುತ್ತಿದ್ದಾರೆ, ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಪರ ಅಲೆ ಇದ್ದು ರಾಜೇಶ್‌ ಗೌಡ ಅಭೂತ ಪೂರ್ವ ಗೆಲುವು ಸಾ​ಸಲಿದ್ದಾರೆ ಎಂದರು.



 

ಬಿಜೆಪಿ ಮುಖಂಡ ಪ್ರಕಾಶ್‌ ಗೌಡ, ಡಾ.ಅನಿಲ್‌, ಡಾ.ದೇವಿ ಶೆಟ್ಟಿ, ಡಾ.ಪ್ರಶಾಂತ್‌, ಶಾಂತಕುಮಾರ್‌, ಬಿ.ಹೆಚ್‌.ಸತೀಶ್‌, ನಾಗೇಶ್‌, ಹರೀಶ್‌, ಮಂಜುನಾಥ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

Comments