ಬಿಜೆಪಿ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ ಡಿಕೆಶಿ !! ರಾಜ್ಯ ಸರ್ಕಾರ ಇನ್ನೂ ಡಿಕೆಶಿ ಕೈಯಲ್ಲಿ

 


ದೇಶ, ರಾಜ್ಯಗಳು ಆರ್ಥಿಕ ಸಂಕಷ್ಟದಲ್ಲಿವೆ ಇಂತಹ ಸಂದರ್ಭದಲ್ಲಿ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿದೆ ಪ್ರತಿ ಯೂನಿಟ್​ಗೆ 40 ಪೈಸೆ ಹೆಚ್ಚಳ ಮಾಡಿದೆ ಇದು ಜನರ ವಿರೋಧಿ ನೀತಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ಯಪಡಿಸಿದ್ದಾರೆ.


ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕೆ, ವ್ಯಾಪಾರ, ರೈತರಿಗೂ ಇದು ಬರೆ ಎಳೆದಿದೆ. ದರ ಏರಿಕೆಯನ್ನ ಕೂಡಲೇ ವಾಪಸ್ ಪಡೆಯಬೇಕು. ಒಂದೂವರೆ ವರ್ಷ ದರ ಏರಿಕೆ ತೀರ್ಮಾನ ಕೈಬಿಡಬೇಕು. ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು ಎಂದು ಡಿಕೆಶಿ ಅವರು ವಿದ್ಯುತ್​ ದರ ಏರಿಕೆಯನ್ನು ಖಂಡಿಸಿದ್ದಾರೆ.



 

ಇನ್ನು ನಾನು ಇಂಧನ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ನನಗೂ ಅಲ್ಪಸ್ವಲ್ಪ ಮಾಹಿತಿ ಇದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ಇಂತಹ ವೇಳೆ ಏರಿಕೆ ಮಾಡಿದ್ದು ಸರಿಯಲ್ಲ. ಕೂಡಲೇ ಸರ್ಕಾರ ಆದೇಶವನ್ನ ವಾಪಸ್ ಪಡೆಯಬೇಕು. ಒಂದು ವಾರದೊಳಗೆ ಆದೇಶ ವಿಥ್ ಡ್ರಾ ಮಾಡಬೇಕು. ಮಾಡದೇ ಹೋದರೆ ನಮ್ಮ ಹೋರಾಟ ಅನಿವಾರ್ಯ. 23 ರಿಂದ 28ರ ವರೆಗೆ ತಾಲೂಕು ಕೇಂದ್ರದಲ್ಲಿ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Comments