ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಜೆಡಿಎಸ್ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ನಡುವಣ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದಾಗ ಔಷಧ, ಆಯಂಬುಲೆನ್ಸ್ ಖರೀದಿಯಲ್ಲಿ ಅಕ್ರಮವೆಸಗಿದ್ದಾರೆ. ಅಕ್ರಮವಾಗಿ 535.22 ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಜೆಡಿಎಸ್ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಸುದ್ದಿಗೋಷ್ಟಿ ನಡೆಸಿದ ವೆಂಕಟಶಿವಾರೆಡ್ಡಿ, ಶಾಸಕ ರಮೇಶ್ ಕುಮಾರ್ ವಿರುದ್ಧ ಅಕ್ರಮದ ದಾಖಲೆಗಳನ್ನು ಬಿಡುಗಡೆ ಮಾಡಿದರು. ಅಲ್ಲದೇ, ತಾವು ಹೇಳುತ್ತಿರುವುದು ಸುಳ್ಳು ಮಾಹಿತಿಯಾದರೆ ತಮ್ಮನ್ನು ಗಲ್ಲಿಗೇರಿಸಲಿ ಎಂದು ಸವಾಲು ಹಾಕಿದರು. ರಮೇಶ್ ಕುಮಾರ್ ತಮ್ಮ ಪ್ರಾಬಲ್ಯ ಬಳಸಿ ಶ್ರೀನಿವಾಸಪುರದಲ್ಲಿ 52 ಎಕರೆ ಭೂ ಖರೀದಿ ಮಾಡಿದ್ದಾರೆ.
Comments
Post a Comment